×
Ad

ಕ್ರೈಸ್ತರನ್ನು ಬಳಸಿಕೊಂಡು ಕೇರಳದಲ್ಲಿ ನೆಲೆಯೂರಲು ಪ್ರಯತ್ನಿಸುತ್ತಿರುವ ಬಿಜೆಪಿ: ವರದಿ

Update: 2020-12-14 19:04 IST

ತಿರುವನಂತಪುರಂ,ಡಿ.14: ತೆಲಂಗಾಣದಲ್ಲಿ ಯಶಸ್ವಿಯಾಗಿ ಕಾಲೂರಿರುವ ಬಿಜೆಪಿ ಪಕ್ಷವು ತಮಿಳುನಾಡಿನಲ್ಲಿ ಕೂಡಾ ತನ್ನ ಪಕ್ಷದ ಪ್ರಚಾರವನ್ನು ತಳಮಟ್ಟದಿಂದ ಪ್ರಾರಂಭಿಸಿದೆ. ಈ ನಡುವೆ ಕೇರಳದಲ್ಲೂ ಕೂಡಾ ಪಕ್ಷವನ್ನು ಸಂಘಟಿಸಲು ಪ್ರಯತ್ನಿಸುತ್ತಿರುವ ಬಿಜೆಪಿಯು ತನ್ನ ಗುರಿಯನ್ನು ತಲುಪಲು ಕೇರಳ ಕ್ರೈಸ್ತ ಸಮುದಾಯವನ್ನು ಓಲೈಸುತ್ತಿದೆ ಎಂದು indianexpress.com ವರದಿ ಮಾಡಿದೆ.

ಈ ಹಿಂದೆ ಕ್ರೈಸ್ತರ ಓಲೈಕೆ ಮಾಡಿಕೊಂಡು ನೆಲೆಯೂರಲು ಪ್ರಯತ್ನಿಸಿದ್ದ ಬಿಜೆಪಿಗೆ ಹಿನ್ನಡೆ ಉಂಟಾಗಿತ್ತು. ಆದರೆ ಸದ್ಯ ಕೇರಳ ಕ್ರೈಸ್ತರಲ್ಲಿ ಮುಸ್ಲಿಮರ ಕುರಿತಾದಂತೆ ಅಸಮಧಾನ ಹೆಚ್ಚಾಗುತ್ತಿರುವುದನ್ನು ಬಳಸಿಕೊಳ್ಳಲು ಬಿಜೆಪಿ ತೀರ್ಮಾನಿಸಿದೆ ಎಂದು ತಿಳಿದು ಬಂದಿದೆ.

ಮೂಲಗಳ ಪ್ರಕಾರ ಕ್ರೈಸ್ತ ಮುಖಂಡರ ನಿಯೋಗವೊಂದು ಶೀಘ್ರವೇ ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿ ಮಾಡಿ ಮನವಿ ಸಲ್ಲಿಸಿ, ತಮ್ಮ ಅಸಮಧಾನ ತೋಡಿಕೊಳ್ಳಲಿದ್ದಾರೆ ಎನ್ನಲಾಗಿದೆ. ಈ ವೇಳೆ ಕೇರಳದಲ್ಲಿ ಸುಮಾರು 80% ಸ್ಕಾಲರ್ಶಿಪ್ ಅನ್ನು ಅಲ್ಪಸಂಖ್ಯಾತ ಸಮುದಾಯದಡಿಯಲ್ಲಿ ಮುಸ್ಲಿಮರೇ ಪಡೆದುಕೊಳ್ಳುತ್ತಿದ್ದಾರೆ ಮತ್ತು ಹಲವಾರು ಕ್ರೈಸ್ತ ಯುವತಿಯರು ಇಸ್ಲಾಮ್ ಧರ್ಮಕ್ಕೆ ಮತಾಂತರವಾಗುತ್ತಿದ್ದಾರೆ ಎಂಬ ವಿಷಯಗಳನ್ನೂ ಈ ಭೇಟಿಯಲ್ಲಿ ಪ್ರಸ್ತಾಪಿಸಲಿದ್ದಾರೆ ಎಂದು ವರದಿಯಾಗಿದೆ.

ಶುಕ್ರವಾರದಂದು ತಿರುವನಂತಪುರದ ರಾಜಭವನದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಕೇರಳದ ಗವರ್ನರ್ ಆರಿಫ್ ಮುಹಮ್ಮದ್ ಖಾನ್, ಸೈರೋ-ಮಲಬಾರ್ ಕ್ಯಾಥೊಲಿಕ್ ಚರ್ಚ್ ನ ಆರ್ಚ್ ಬಿಷಪ್ ಜಾರ್ಜ್ ಅಲಂಚೇರಿರವರಿಗೆ ‘Justice for All, prejudice to None’ ಎಂಬ ಪುಸ್ತಕವನ್ನು ನೀಡಿದ್ದರು. ಈ ಪುಸ್ತಕವನ್ನು ಮಿಝೋರಾಮ್ ಮತ್ತು ಕೇರಳದ ಕೆಲವು ಸಮುದಾಯಗಳ ಕುರಿತಾದಂತೆ ಬಿಜೆಪಿ ಕೇರಳ ಯುನಿಟ್ ಮಾಜಿ ಅಧ್ಯಕ್ಷ ಎಸ್. ಶ್ರೀಧರನ್ ಪಿಳ್ಳೈ ಬರೆದಿದ್ದರು. ಈ ನಡೆಯು ಕೂಡಾ ಚರ್ಚ್ ಮುಖ್ಯಸ್ಥರು ಬಿಜೆಪಿಯೊಂದಿಗಿನ ಹೊಂದಾಣಿಕೆಯನ್ನು ಬಯಸಿದ್ದಾರೆ ಅನ್ನುವುದಕ್ಕೆ ಒತ್ತು ಕೊಡುತ್ತದೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News