×
Ad

ಅಲಿಗಢ್ ಮುಸ್ಲಿಮ್ ಯುನಿವರ್ಸಿಟಿಗೆ ಶತಮಾನೋತ್ಸವ: ಮುಖ್ಯ ಅತಿಥಿಯಾಗಿ ಪ್ರಧಾನಿ ಮೋದಿ

Update: 2020-12-17 13:04 IST

ಆಗ್ರಾ,ಡಿ.17: ದೇಶದ ಹಳೆಯ ವಿಶ್ವವಿದ್ಯಾನಿಲಯಗಳಲ್ಲೊಂದಾದ ಅಲಿಗಢ್ ಮುಸ್ಲಿಮ್ ಯುನಿವರ್ಸಿಟಿಯು 100 ವರ್ಷಗಳನ್ನು ಪೂರೈಸುವ ಸಂಭ್ರಮದಲ್ಲಿದೆ. ಡಿ.22ರಂದು ನಡೆಯಲಿರುವ ಈ ಶತಮಾನೋತ್ಸವ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ ಎಂದು ತಿಳಿದು ಬಂದಿದೆ.

“ಯಾವುದೇ ವಿಶ್ವವಿದ್ಯಾಲಯಕ್ಕೂ ಶತಮಾನೋತ್ಸವವು ಒಂದು ಐತಿಹಾಸಿಕ ಮೈಲುಗಲ್ಲಾಗಿದೆ. ನಮ್ಮ ಆಹ್ವಾನವನ್ನು ಸ್ವೀಕರಿಸಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿಯವರಿಗೆ ನಾನು ಹಾಗೂ ಅಲಿಗಢ್ ಮುಸ್ಲಿಮ್ ಯುನಿವರ್ಸಿಟಿಯ ಎಲ್ಲ ಸಿಬ್ಬಂದಿ ಆಭಾರಿಯಾಗಿದ್ದೇವೆ” ಎಂದು ಉಪ ಕುಲಪತಿ ತಾರೀಖ್ ಮನ್ಸೂರ್ ಹೇಳಿದ್ದಾರೆ. “ಪ್ರಧಾನಮಂತ್ರಿಯವರು ಕಾರ್ಯಕ್ರಮದಲ್ಲಿ ಭಾಗವಹಿಸುವುದರಿಂದ ವಿಶ್ವವಿದ್ಯಾಲಯದ ಅಭಿವೃದ್ಧಿಗೆ ವೇಗ ದೊರಕುತ್ತದೆ. ಕಾರ್ಯಕ್ರಮದಲ್ಲಿ ಕೇಂದ್ರ ಮಾನವ ಸಂಪನ್ಮೂಲ ಸಚಿವ ರಮೇಶ್ ಪೋಖ್ರಿಯಾಲ್ ಕೂಡಾ ಭಾಗವಹಿಸಲಿದ್ದಾರೆ” ಎಂದೂ ಅವರು ಹೇಳಿದರು.

1964ರ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಆಗಿನ ಪ್ರಧಾನಮಂತ್ರಿ ಲಾಲ್ ಬಹದ್ದೂರ್ ಶಾಸ್ತ್ರಿ ಭಾಗವಹಿಸಿದ್ದರು. ಅದರ ಬಳಿಕ ಇದೀಗ ನರೇಂದ್ರ ಮೋದಿ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ. ಇನ್ನು ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಕೂಡಾ ಭಾಗವಹಿಸಲಿದ್ದಾರೆ ಎಂದು ಅಧಿಕೃತರು ಹೇಳಿಕೆ ನೀಡಿದ್ದರು. ಆದರೆ ಅವರು ಫೆಬ್ರವರಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿದು ಬಂದಿದೆ. ಕೋವಿಡ್ ಕಾರಣದಿಂದಾಗಿ ಕಾರ್ಯಕ್ರಮವು ಆನ್ ಲೈನ್ ಮುಖಾಂತರ ನಡೆಯಲಿದೆ.

“ನಮ್ಮ ವಿಶ್ವವಿದ್ಯಾನಿಲಯವನ್ನು ಗುರಿಪಡಿಸುವ ಬಿಜೆಪಿಗರಿಗೆ ಪ್ರಧಾನಿ ನರೇಂದ್ರ ಮೋದಿ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದು ಒಂದು ಉತ್ತರವಾಗಿದೆ ಎಂದು ಯುನಿವರ್ಸಿಟಿಯ ಹಿರಿಯ ಅಧಿಕಾರಿಯೋರ್ವರು ತಿಳಿಸಿದ್ದಾಗಿ timesofindia.com ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News