ಅಲ್ವಾರ್‌ನಲ್ಲಿ ಭೂಕಂಪ; ದಿಲ್ಲಿಯಲ್ಲೂ ನಡುಗಿದ ಭೂಮಿ
Update: 2020-12-18 09:15 IST
ಹೊಸದಿಲ್ಲಿ, ಡಿ.18: ರಾಜಸ್ಥಾನದ ಅಲ್ವಾರ್‌ನಲ್ಲಿ ಗುರುವಾರ ರಾತ್ರಿ ಲಘು ಭೂಕಂಪ ಸಂಭವಿಸಿದ್ದು, ದಿಲ್ಲಿ-ಎನ್‌ಸಿಆರ್ ಪ್ರದೇಶದಲ್ಲೂ ಕಂಪನ ಅನುಭವಕ್ಕೆ ಬಂದಿದೆ ಎಂದು ರಾಷ್ಟ್ರೀಯ ಭೂಕಂಪ ವಿಜ್ಞಾನ ಸಂಸ್ಥೆ ಹೇಳಿದೆ.
ಮಧ್ಯಮ ಪ್ರಮಾಣದ ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 4.2ರಷ್ಟಿತ್ತು. ಈ ಭೂಕಂಪದ ಕೇಂದ್ರಬಿಂದು ಅಲ್ವಾರ್‌ನಲ್ಲಿತ್ತು. ಭೂಮಿ ಕಂಪಿಸಿದ್ದು ಅನುಭವಕ್ಕೆ ಬಂದ ಹಿನ್ನೆಲೆಯಲ್ಲಿ ಜನ ಭಯಭೀತರಾಗಿ ಮನೆಗಳಿಂದ ಹೊರಬಂದರು. ಯಾವುದೇ ಜೀವಹಾನಿ ಅಥವಾ ಆಸ್ತಿಪಾಸ್ತಿಗೆ ಹಾನಿಯಾದ ಬಗ್ಗೆ ವರದಿ ಬಂದಿಲ್ಲ.
ಗುರುಗಾಂವ್, ಗಾಝಿಯಾಬಾದ್ ಮತ್ತು ನೋಯ್ಡದಲ್ಲೂ ಕಂಪನ ಅನುಭವಕ್ಕೆ ಬಂದಿದೆ ಎಂದು ಸ್ಕೈಮೆಟ್ ವೆದರ್ ಹೇಳಿದೆ. 4.2 ತೀವ್ರತೆಯ ಭೂಕಂಪ ರಾತ್ರಿ 11:46ಕ್ಕೆ ಸುಮಾರು ಐದು ಕಿಲೋಮೀಟರ್ ಆಳದಲ್ಲಿ ಸಂಭವಿಸಿದೆ ಎಂದು ಎನ್‌ಸಿಎಸ್ ವಿವರಿಸಿದೆ.