ಹತ್ರಸ್ ಪ್ರಕರಣ: ಬಿಜೆಪಿ ಐಟಿ ಸೆಲ್ ಮುಖ್ಯಸ್ಥನ ಬಂಧನಕ್ಕೆ ಆರ್ಟಿಐ ಕಾರ್ಯಕರ್ತ ಸಾಕೇತ್ ಗೋಖಲೆ ಆಗ್ರಹ

Update: 2020-12-19 09:32 GMT
Saket Gokhale (Twitter)

ಹೊಸದಿಲ್ಲಿ,ಡಿ.19: ದೇಶವನ್ನೇ ಬೆಚ್ಚಿಬೀಳಿಸಿದ್ದ ಉತ್ತರಪ್ರದೇಶದ ಹತ್ರಸ್ ನ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಐಟಿ ಸೆಲ್ ನ ಮುಖ್ಯಸ್ಥ ಅಮಿತ್ ಮಾಳವೀಯ ಸಾಮಾಜಿಕ ತಾಣದಲ್ಲಿ ಸಂತ್ರಸ್ತೆಯ ಗುರುತು ಬಹಿರಂಗಪಡಿಸಿದ್ದರು. ಇದೀಗ ಅಮಿತ್ ಮಾಳವೀಯನನ್ನು ಬಂಧಿಸುವಂತೆ ಆರ್ಟಿಐ ಕಾರ್ಯಕರ್ತ ಸಾಕೇತ್ ಗೋಖಲೆ ಆಗ್ರಹಿಸಿದ್ದಾರೆ.

ತನ್ನ ಫೇಸ್ ಬುಕ್ ಖಾತೆಯಲ್ಲಿ ಈ ಕುರಿತು ಬರೆದಿರುವ ಗೋಖಲೆ “ಹತ್ರಸ್ ಪ್ರಕರಣವು ನಡೆದ ಸಂದರ್ಭದಲ್ಲಿ ಸಂತ್ರಸ್ತೆಯ ವೀಡಿಯೋವನ್ನು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಟ್ವಿಟರ್ ನಲ್ಲಿ ಪ್ರಕಟಿಸಿದ್ದರು. ಅತ್ಯಾಚಾರಕ್ಕೊಳಗಾಗಿರುವ ಸಂತ್ರಸ್ತೆಯ ಗುರುತು ಬಹಿರಂಗಪಡಿಸುವುದು ಅಪರಾಧವಾಗಿದ್ದು, ಈ ಕುರಿತು ನಾನು ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ದೂರು ಸಲ್ಲಿಸಿದ್ದೆ. ಈ ವೇಳೆ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾರವರು, ‘ಪ್ರಕರಣವು ಅತ್ಯಾಚಾರವೆಂದು ಸಾಬೀತಾದರೆ ಮಾತ್ರ’ ಎಂದು ಹೇಳಿಕೆ ನೀಡಿದ್ದು, ಅಮಿತ್ ವಿರುದ್ಧ ಯಾವುದೇ ಕ್ರಮವನ್ನೂ ಕೈಗೊಂಡಿರಲಿಲ್ಲ”

“ಹತ್ರಸ್ ನ ಪೊಲೀಸರು ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ದಾಖಲಿಸಿದ್ದರೂ ಕೂಡಾ, ರೇಖಾ ಶರ್ಮಾ ಮಾತ್ರ ಯಾವುದೇ ಕ್ರಮ ಕೈಗೊಳ್ಳದೆ ಬಿಜೆಪಿ ಮತ್ತು ಉತ್ತರಪ್ರದೇಶ ಸರಕಾರದ ಬೆಂಬಲಕ್ಕೆ ನಿಂತಂತೆ ವರ್ತಿಸಿದ್ದಾರೆ. ಇದೀಗ ಸಿಬಿಐ ಚಾರ್ಜ್ ಶೀಟ್ ನಲ್ಲಿ ಯುವತಿಯು ಸಾಮೂಹಿಕ ಅತ್ಯಾಚಾರಕ್ಕೊಳಗಾಗಿ ಕೊಲೆಯಾಗಿದ್ದನ್ನು ಸ್ಪಷ್ಟಪಡಿಸಿದೆ. ಇದೀಗ ನಾನು ಮತ್ತೆ ಮಹಿಳಾ ಆಯೋಗಕ್ಕೆ ನೋಟಿಸ್ ಕಳುಹಿಸಿದ್ದೇನೆ. ಭಾರತೀಯ ದಂಡ ಸಂಹಿತೆ ಪ್ರಕಾರ 7 ದಿನಗಳ ಒಳಗಾಗಿ ಅಮಿತ್ ಮಾಳವೀಯನನ್ನು ಬಂಧಿಸಬೇಕು. ಇಲ್ಲದಿದ್ದರೆ ಒಂದು ವಾರದೊಳಗಡೆ ನಾನು ಮತ್ತೊಂದು ಪ್ರಕರಣ ದಾಖಲಿಸುತ್ತೇನೆ ಎಂದು ತಮ್ಮ ಫೇಸ್ಬುಕ್ ಖಾತೆಯಲ್ಲಿ ತಿಳಿಸಿದ್ದಾರೆ.

In October, BJP IT cell head Amit Malviya had tweeted a video disclosing the identity of the Hathras victim. When I...

Posted by Saket Gokhale on Friday, 18 December 2020

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News