ಅರ್ಜುನ್ ರಾಂಪಾಲ್ ವಿಚಾರಣೆ ನಡೆಸಿದ ಎನ್‌ಸಿಬಿ
Update: 2020-12-21 22:05 IST
ಮುಂಬೈ, ಡಿ.20: ಹಿಂದಿ ಚಿತ್ರನಟ ಅರ್ಜುನ್ ರಾಂಪಾಲ್ ಸೋಮವಾರ ಎನ್‌ಸಿಬಿ(ಮಾದಕವಸ್ತು ನಿಯಂತ್ರಣ ವಿಭಾಗ) ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗಿದ್ದಾರೆ. ಈ ತಿಂಗಳಲ್ಲಿ ಎರಡನೇ ಬಾರಿ ಅವರು ವಿಚಾರಣೆ ಎದುರಿಸಿದ್ದಾರೆ.
ಮಾದಕವಸ್ತು ವ್ಯವಹಾರದಲ್ಲಿ ಹಿಂದಿ ಚಿತ್ರರಂಗದ ಹಲವರ ಬಗ್ಗೆ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಎನ್‌ಸಿಬಿ ತನಿಖೆ ಕೈಗೆತ್ತಿಕೊಂಡಿದ್ದು ಕಳೆದ ತಿಂಗಳು ಅರ್ಜುನ್ ರಾಂಪಾಲ್ ನಿವಾಸದ ಮೇಲೆ ದಾಳಿ ನಡೆಸಿ ಇಲೆಕ್ಟ್ರಾನಿಕ್ ಗ್ಯಾಜೆಟ್‌ಗಳನ್ನು ವಶಕ್ಕೆ ಪಡೆದಿತ್ತು. ಬಳಿಕ ನವೆಂಬರ್ 13ರಂದು ರಾಂಪಾಲ್ ಎನ್‌ಸಿಬಿ ಎದುರು ವಿಚಾರಣೆಗೆ ಹಾಜರಾಗಿದ್ದರು. ಕಳೆದ ವಾರ ಮತ್ತೊಮ್ಮೆ ಅವರಿಗೆ ಸಮನ್ಸ್ ನೀಡಲಾಗಿತ್ತು. ಆದರೆ ವೈಯಕ್ತಿಕ ಕಾರಣದಿಂದ ಈಗ ವಿಚಾರಣೆಗೆ ಹಾಜರಾಗಲು ಸಾಧ್ಯವಿಲ್ಲ. ಡಿಸೆಂಬರ್ 21ರವರೆಗೆ ಅವಕಾಶ ನೀಡಬೇಕೆಂದು ರಾಂಪಾಲ್ ಕೋರಿದ್ದರು.