ಜಮ್ಮು-ಕಾಶ್ಮೀರದಲ್ಲಿ ವಿಶೇಷ ಸ್ಥಾನಮಾನ ಮರು ಸ್ಥಾಪಿಸುವ ತನಕ ಚುನಾವಣೆಯಲ್ಲಿ ಸ್ಪರ್ಧಿಸಲಾರೆ: ಮುಫ್ತಿ

Update: 2020-12-23 12:18 GMT

ಹೊಸದಿಲ್ಲಿ:  ಜಮ್ಮು ಹಾಗೂ ಕಾಶ್ಮೀರದ ಸ್ಥಳೀಯ ಚುನಾವಣೆಗಳಲ್ಲಿನ ಫಲಿತಾಂಶವು ಉತ್ತೇಜನಕಾರಿಯಾಗಿದೆ ಎಂದಿರುವ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರು ವಿಧಿ 370ರಡಿ ಸಿಗುವ ವಿಶೇಷ ಸ್ಥಾನಮಾನವನ್ನು ಮರು ಸ್ಥಾಪಿಸುವ ತನಕ ನಾನು ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸಲಾರೆ ಎಂದರು.

ಜಮ್ಮು-ಕಾಶ್ಮೀರದ ತನ್ನದೇ ಸಂವಿಧಾನ ಮರಳಿ ಬರುವ ತನಕ ಹಾಗೂ ವಿಧಿ 370 ಮರು ಸ್ಥಾಪಿಸುವ ತನಕ ನಾನು ವಿಧಾನಸಭೆ ಸಹಿತ ಯಾವುದೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು NDTVಗೆ ಮುಫ್ತಿ ತಿಳಿಸಿದ್ದಾರೆ.

ಪಿಡಿಪಿ ಹಾಗೂ ನ್ಯಾಶನಲ್ ಕಾನ್ಫರೆನ್ಸ್ ಪರಸ್ಪರ ವಿರೋಧಿ ಪಕ್ಷಗಳು. ಆದರೆ, ಜಮ್ಮು-ಕಾಶ್ಮೀರದ ಮಹತ್ವದ ಕಾರಣಕ್ಕೆ ನಾವಿಬ್ಬರೂ ಒಂದಾಗಿದ್ದೇವೆ. ಅಂತಿಮವಾಗಿ ನಾವೆಲ್ಲರೂ ಕಾಶ್ಮೀರಿಗಳಾಗಿದ್ದೇವೆ. ನಾವು ಚುನಾವಣೆಗಳನ್ನು ಕುರಿತು ಮಾತ್ರ ಮಾತನಾಡುತ್ತಿಲ್ಲ ರಾಜ್ಯ ಕಳೆದುಕೊಂಡಿರುವ ವಿಶೇಷ ಸ್ಥಾನಮಾನದ ಕುರಿತು ಮಾತನಾಡುತ್ತೇವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News