×
Ad

ಕೃಷಿ ಕಾನೂನು ರದ್ದತಿಗೆ ಆಗ್ರಹಿಸಿ ರಾಜಭವನದತ್ತ ಸಾವಿರಾರು ರೈತರಿಂದ ಮೆರವಣಿಗೆ

Update: 2020-12-29 13:38 IST

ಪಾಟ್ನಾ: ಕೇಂದ್ರ ಸರಕಾರದ ನೂತನ ಕೃಷಿ ಕಾನೂನುಗಳ ರದ್ದತಿಗೆ ಆಗ್ರಹಿಸಿ ಸಾವಿರಾರು ರೈತರು ಮಂಗಳವಾರ ಪಾಟ್ನಾದ ರಾಜಭವನಕ್ಕೆ ಮೆರವಣಿಗೆಯಲ್ಲಿ ತೆರಳಿದರು. ಈ ಮೂಲಕ ದೇಶಾದ್ಯಂತ ನಡೆಯತ್ತಿರುವ ಪ್ರತಿಭಟನೆಗೆ ಕೈಜೋಡಿಸಿದರು.

ಸಾವಿರಾರು ರೈತರು ಕಳೆದೊಂದು ತಿಂಗಳಿನಿಂದ ದಿಲ್ಲಿ ಹೆದ್ದಾರಿಯಲ್ಲಿ ಭಾರೀ ಪ್ರತಿಭಟನೆ ನಡೆಸುತ್ತಿದ್ದಾರೆ. ಕಾರ್ಪೋರೇಟ್‌ಗಳು ಕೃಷಿ ವಲಯದಲ್ಲಿ ಪ್ರಾಬಲ್ಯ ಸಾಧಿಸಿ ತಮ್ಮ ಆದಾಯಕ್ಕೆ ಕುತ್ತುತರಲಿದ್ದಾರೆಂಬ ಆತಂಕದಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News