×
Ad

ಭಾರತದಲ್ಲಿ ರೂಪಾಂತರಿತ ಕೊರೋನ ಪ್ರಕರಣಗಳ ಸಂಖ್ಯೆ 20ಕ್ಕೇರಿಕೆ

Update: 2020-12-30 11:37 IST

ಹೊಸದಿಲ್ಲಿ: ಭಾರತದಲ್ಲಿ ಇಂದು ಹೊಸತಾಗಿ 14 ರೂಪಾಂತರಿತ ಕೊರೋನ ವೈರಸ್ ಪ್ರಕರಣ ವರದಿಯಾಗಿದ್ದು, ದೇಶದಲ್ಲೀಗ ರೂಪಾಂತರ ವೈರಸ್ ಪ್ರಕರಣಗಳ ಸಂಖ್ಯೆ 20ಕ್ಕೇರಿದೆ ಎಂದು ಕೇಂದ್ರ ಸರಕಾರ ಇಂದು ತಿಳಿಸಿದೆ.

 ಹೊಸ ರೂಪಾಂತರಿತ ವೈರಸ್ ಹೆಚ್ಚು ಸಾಂಕ್ರಾಮಿಕ ಎಂದು ನಂಬಲಾಗಿದ್ದು ವಿಶ್ವದಲ್ಲಿ ಹೆಚ್ಚು ವೇಗವಾಗಿ ಹರಡುತ್ತಿದೆ. ಬ್ರಿಟಿನ್ ನಲ್ಲಿ ಕಂಡುಬಂದಿರುವ ರೂಪಾಂತರಿತ ವೈರಸ್ ನಿಯಂತ್ರಣಕ್ಕೆ ಸಿಗುತ್ತಿಲ್ಲ ಎಂದು ಅದು ಘೋಷಿಸಿತ್ತು. ಆ ನಂತರ ಬ್ರಿಟನ್ ಗೆ ಪ್ರಯಾಣ ನಿರ್ಬಂಧವನ್ನು ಹೇರಲಾಗಿದೆ.

ಮಂಗಳವಾರ ಆರು ರೋಗಿಗಳಲ್ಲಿ ರೂಪಾಂತರಿತ ಕೊರೋನ ವೈರಸ್ ಕಾಣಿಸಿಕೊಂಡಿತ್ತು. ಒಟ್ಟು 20 ಹೊಸ ಪ್ರಕರಣಗಳಲ್ಲಿ ದಿಲ್ಲಿ ಲ್ಯಾಬ್ ನಲ್ಲಿ 8, ಬೆಂಗಳೂರು ಲ್ಯಾಬ್ ನಲ್ಲಿ 7 ಕೇಸ್ ಗಳು ದಾಖಲಾಗಿವೆ. ಈ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ.

ಇದು ಹೆಚ್ಚು ಮಾರಕ ಅಥವಾ ಲಸಿಕೆಯಿಂದ ನಿಯಂತ್ರಿಸಲು ಸಾಧ್ಯವಿಲ್ಲ ಎಂದು ನಂಬಲು ಇನ್ನೂ ಯಾವುದೇ ಕಾರಣವಿಲ್ಲ ಎಂದು ವೈದ್ಯರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News