×
Ad

ಬ್ರಿಟನ್ ವಿಮಾನ ಹಾರಾಟಕ್ಕೆ ಹೇರಲಾಗಿರುವ ನಿಷೇಧ ಜನವರಿ 7ರ ತನಕ ವಿಸ್ತರಣೆ

Update: 2020-12-30 12:08 IST

ಹೊಸದಿಲ್ಲಿ: ರೂಪಾಂತರಿತ ಕೊರೋನ ವೈರಸ್ ಕಾಟ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬ್ರಿಟನ್ ಗೆ ತೆರಳುವ ಹಾಗೂ ಅಲ್ಲಿಂದ ಬರುವ ವಿಮಾನಗಳಿಗೆ ವಿಧಿಸಲಾಗಿರುವ ನಿಷೇಧವನ್ನು ಜನವರಿ 7ರ ತನಕ ವಿಸ್ತರಿಸಲಾಗಿದೆ ಎಂದು ಕೇಂದ್ರ ಸರಕಾರ ಬುಧವಾರ ತಿಳಿಸಿದೆ.

ಬ್ರಿಟನ್ ಗೆ ತೆರಳುವ ಹಾಗೂ ಅಲ್ಲಿಂದ ಬರುವ ವಿಮಾನಗಳಿಗೆ ಹೇರಲಾಗಿರುವ ತಾತ್ಕಾಲಿಕ ನಿಷೇಧವನ್ನು 2021ರ ಜನವರಿ 7ರ ತನಕ ವಿಸ್ತರಿಸಲು ನಿರ್ಧರಿಸಲಾಗಿದೆ.ಕಟ್ಟುನಿಟ್ಟಾಗಿ ನಿಯಂತ್ರಿತ ಪುನರಾರಂಭ ನಡೆಯಲಿದ್ದು, ಇದಕ್ಕಾಗಿ ಶೀಘ್ರವೇ ವಿವರಗಳನ್ನು ಪ್ರಕಟಿಸಲಾಗುವುದು ಎಂದು ವಿಮಾನಯಾನ ಸಚಿವ ಹರ್ ದೀಪ್ ಸಿಂಗ್ ಪುರಿ ಟ್ವೀಟಿಸಿದ್ದಾರೆ.

ಭಾರತವು ಈ ಮೊದಲು ಬ್ರಿಟನ್ ವಿಮಾನಗಳಿಗೆ ಡಿಸೆಂಬರ್ 23ರಿಂದ ಡಿ.31ರ ತನಕ ನಿಷೇಧ ಹೇರಲು ನಿರ್ಧರಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News