×
Ad

ನ್ಯಾಯಾಲಯದಲ್ಲಿ ವಿವಾಹವಾಗಲು ತೆರಳುತ್ತಿದ್ದ ಜೋಡಿಯ ಗುಂಡಿಟ್ಟು ಹತ್ಯೆ

Update: 2020-12-31 12:19 IST

ರೋಹ್ಟಕ್: ಯುವಕ ಹಾಗೂ ಯುವತಿ ರೋಹ್ಟಕ್‌ನ ನ್ಯಾಯಾಲಯದಲ್ಲಿ ಬುಧವಾರ ವಿವಾಹವಾಗಲು ತೆರಳುತ್ತಿದ್ದ ಮಾರ್ಗದಲ್ಲಿ ಹಾಡುಹಗಲೇ ಗುಂಡಿಟ್ಟು ಸಾಯಿಸಿರುವ ಆಘಾತಕಾರಿ ಘಟನೆ ನಡೆದಿದೆ.

ಮಹರ್ಷಿ ದಯಾನಂದ ವಿಶ್ವವಿದ್ಯಾಲಯದ ಗೇಟ್ ನಂ.1ರ ಎದುರು ಈ ಘಟನೆ ನಡೆದಿದೆ. ಮುಖಕ್ಕೆ ಮಾಸ್ಕ್ ಹಾಕಿಕೊಂಡಿದ್ದ ದುಷ್ಕರ್ಮಿಗಳು 25ರ ವಯಸ್ಸಿನ ಯುವಕ ಹಾಗೂ 27ರ ವಯಸ್ಸಿನ ಯುವತಿಯ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ ಯುವತಿಯ ತಂದೆಯೇ ಈ ಜೋಡಿಯ ಮೇಲೆ ಗುಂಡಿನ ದಾಳಿ ನಡೆಸಿ ಕೊಂದಿದ್ದಾನೆ.

ನ್ಯಾಯಾಲಯದಲ್ಲಿ ಮದುವೆಯಾಗಲು ಕೆಲವು ವಿಧಿವಿಧಾನ ರೂಪಿಸಲು ಪುರುಷ ಹಾಗೂ ಮಹಿಳೆಯ ಕುಟುಂಬದವರು ಭೇಟಿಯಾಗಬೇಕಿತ್ತು. ಆದರೆ ಮಹಿಳೆಯ ಮನೆಯವರು ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ ಎಂದು ಉಪ ಪೊಲೀಸ್ ಅಧೀಕ್ಷಕ ಸಜ್ಜನ್ ಸಿಂಗ್ ಹೇಳಿದ್ದಾರೆ.

ಮೃತಪಟ್ಟ ಯುವಕನ ಕುಟುಂಬದವರು ನೀಡಿದ ದೂರಿನ ಆಧಾರದಲ್ಲಿ ಯುವತಿಯ ಕುಟುಂಬದ ಕೆಲವು ಸದಸ್ಯರ ಮೇಲೆ ಹತ್ಯೆ ಹಾಗೂ ಇತರ ಸಂಬಂಧಿತ ಕಾನೂನಿನಡಿ ಪ್ರಕರಣವನ್ನು ದಾಖಲಿಸಲಾಗಿದೆ. ತನಿಖೆ ಮುಂದುವರಿದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News