10ನೇ, 12ನೇ ತರಗತಿಯ ಸಿಬಿಎಸ್‌ಇ ಬೋರ್ಡ್ ಪರೀಕ್ಷೆಯ ದಿನಾಂಕ ಪ್ರಕಟ
Update: 2020-12-31 18:35 IST
ಹೊಸದಿಲ್ಲಿ: ಸಿಬಿಎಸ್‌ಇ 10 ಹಾಗೂ 12ನೇ ತರಗತಿಗಳ ಬೋರ್ಡ್ ಪರೀಕ್ಷೆಗಳು ಮೇ 4ರಿಂದ ಜೂನ್ 10ರ ತನಕ ನಡೆಯಲಿದ್ದು, ಜುಲೈ 15ರಂದು ಫಲಿತಾಂಶ ಪ್ರಕಟವಾಗಲಿದೆ ಎಂದು ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂತ್ ಗುರುವಾರ ಪ್ರಕಟಿಸಿದ್ದಾರೆ.
ಕೊರೋನ ವೈರಸ್ ಸಾಂಕ್ರಾಮಿಕ ಕಾಯಿಲೆಯಿಂದಾಗಿ ಬೋರ್ಡ್ ಪರೀಕ್ಷೆ ನಡೆಸುವುದಿಲ್ಲ ಎಂದು ಈ ಹಿಂದೆ ನಿಶಾಂಕ್ ಹೇಳಿಕೆ ನೀಡಿದ್ದರು.
ಸಾಮಾನ್ಯವಾಗಿ ಪ್ರಾಯೋಗಿಕ ಪರೀಕ್ಷೆಯು ಜನವರಿಯಲ್ಲಿ ನಡೆದರೆ, ಥಿಯರಿ ಪರೀಕ್ಷೆಗಳು ಫೆಬ್ರವರಿಯಲ್ಲಿ ಆರಂಭವಾಗಿ, ಮಾರ್ಚ್‌ನಲ್ಲಿ ಕೊನೆಯಾಗುತ್ತವೆೆ.
ಬೋರ್ಡ್ ಪರೀಕ್ಷೆಯ ದಿನಾಂಕದಲ್ಲಿ ಸ್ಪಷ್ಟತೆ ಇಲ್ಲದ ಕಾರಣ ಹಲವು ಶಾಲೆಗಳು ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಲು ಈಗಾಗಲೆ ಪೂರ್ವ ಮಂಡಳಿ ಪರೀಕ್ಷೆಯನ್ನು ಆನ್‌ಲೈನ್‌ನಲ್ಲಿ ಆರಂಭಿಸಿವೆ.