×
Ad

ಕಂಟೈನರ್ ಟ್ರಕ್ ನ್ನು ಸುಸಜ್ಜಿತ ತಾತ್ಕಾಲಿಕ ಮನೆಯನ್ನಾಗಿ ಪರಿವರ್ತಿಸಿದ ಪಂಜಾಬ್ ರೈತ

Update: 2021-01-03 12:14 IST

ಹೊಸದಿಲ್ಲಿ: ಮೂರು ಕೃಷಿ ಕಾನೂನುಗಳ ವಿರುದ್ಧ ಸಿಂಘು ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ಜಲಂಧರ್ ಮೂಲದ ರೈತ ಕಂಟೈನರ್ ಟ್ರಕ್ ಅನ್ನು ಸಂಪೂರ್ಣ ಸುಸಜ್ಜಿತ ತಾತ್ಕಾಲಿಕ ಮನೆಯನ್ನಾಗಿ ಪರಿವರ್ತಿಸಿದ್ದಾರೆ.
ಹರ್ಷೀತ್ ಸಿಂಗ್ ಮಾಟ್ಟು ಅವರ ತಾತ್ಕಾಲಿಕ ಮನೆಯಲ್ಲಿ ಸೋಫಾ, ಹಾಸಿಗೆ,ಟಿವಿ ಹಾಗೂ ಮೊಬೈಲ್ ಜಾರ್ಜಿಂಗ್ ಪಾಯಿಂಟ್ ಗಳ ಜೊತೆಗೆ ಕ್ರಿಯಾತ್ಮಕ ಶೌಚಾಲಯದಂತಹ ಎಲ್ಲ ಮೂಲಭೂತ ಸೌಲಭ್ಯಗಳಿವೆ.
"ನಾನು ಡಿಸೆಂಬರ್ 2ರಂದು ಅಮೆರಿಕ ಮೂಲದ ನನ್ನ ಹಿರಿಯ ಸಹೋದರನ ಕರೆಯ ಮೇರೆಗೆ ಇಲ್ಲಿಗ ಬಂದಿದ್ದೇನೆ. ಅವರು ನನ್ನಲ್ಲಿ ರೈತರಿಗೆ ಸೇವೆ ಸಲ್ಲಿಸುವಂತೆ ಕೋರಿಕೊಂಡರು. ನಾನು ನನ್ನ ಎಲ್ಲ ಕೆಲಸಗಳನ್ನುಬಿಟ್ಟು 7 ದಿನಗಳ ಕಾಲ ಸಿಂಘುಗಡಿಯಲ್ಲಿ ಸೇವೆ ಸಲ್ಲಿಸಿದ್ದೇನೆ. ನನ್ನ ಐದು ಟ್ರಕ್ ಗಳು ಸಿಂಘು ಗಡಿಯಲ್ಲಿದ್ದವು. ಹೊಟೇಲ್‍ಗೆ ತಂಗಲು ಹೋಗುತ್ತಿದ್ದ ಸಮಯದಲ್ಲಿ ನನ್ನ ಟ್ರಕ್ ನ್ನು ತಾತ್ಕಾಲಿಕ ಮನೆಯನ್ನಾಗಿ ಏಕೆ ಬದಲಾಯಿಸಬಾರದೆಂದು ಯೋಚನೆ ಬಂತು. ಈ ಮನೆ ನಿರ್ಮಿಸಲು ಸ್ನೇಹಿತರು ಸಹಾಯ ಮಾಡಿದರು. ಈ ಮನೆ ಪೂರ್ಣಗೊಳ್ಳಲು ಒಂದೂವರೆ ದಿನ ತೆಗೆದುಕೊಂಡಿತು'' ಎಂದು ಮಾಟ್ಟು ಎನ್ ಐಎಗೆ ತಿಳಿಸಿದ್ದಾರೆ. 

ಮಾಟ್ಟು ಅವರು ಸಿಂಘು ಗಡಿ ಪ್ರತಿಭಟನಾ ಸ್ಥಳದಲ್ಲಿ ಕ್ಯಾಂಟೀನ್ ತೆರೆದಿದ್ದು, ದಾರಿಹೋಕರು, ರೈತರಿಗೆ ಇಲ್ಲಿ ಉಚಿತ ಚಹಾ ತಿಂಡಿ ಹಾಗೂ ಅಹಾರವನ್ನು ನೀಡಲಾಗುತ್ತಿದೆ. ಇದು ಬೆಳಗ್ಗಿನಿಂದ ಸಂಜೆ ತನಕ ತೆರೆದಿರುತ್ತದೆ.
ಜಲಂಧರ್ ಮೂಲದ ರೈತನೊಂದಿಗೆ ಅವರ ಪತ್ನಿ, ಮಗ, ಸೋದರಳಿಯ ಹಾಗೂ ಸುಮಾರು 80-90 ಸಹಾಯಕರ ತಂಡವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News