ಭಾರತದಲ್ಲಿ ತಯಾರಿಸಲ್ಪಟ್ಟಿರುವ ಕೊರೋನ ಲಸಿಕೆ ಪ್ರತಿಯೊಬ್ಬರಿಗೂ ಹೆಮ್ಮೆ ತಂದಿದೆ: ನರೇಂದ್ರ ಮೋದಿ

Update: 2021-01-03 08:09 GMT

ಹೊಸದಿಲ್ಲಿ: ಎರಡು ಕೊರೋನ ವೈರಸ್ ಲಸಿಕೆಗಳನ್ನು ತುರ್ತು ಪರಿಸ್ಥಿತಿಯಲ್ಲಿ ನಿರ್ಬಂಧಿತ ಬಳಕೆಗೆ ಭಾರತೀಯ ಪ್ರಧಾನ ಔಷಧ ನಿಯಂತ್ರಕ(ಡಿಸಿಜಿಐ) ಅನುಮೋದನೆ ಘೋಷಿಸಿದ ಕೆಲವೇ ನಿಮಿಷದಲ್ಲಿ ಪ್ರತಿಕ್ರಿಯಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಈ ಎರಡು ಲಸಿಕೆಗಳು ಭಾರತದಲ್ಲಿ ತಯಾರಿಸಲ್ಪಟ್ಟಿವೆ. ಇದು ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆಯ ವಿಚಾರ ಎಂದು ಹೇಳಿದ್ದಾರೆ.

ತುರ್ತು ಬಳಕೆಗೆ ಅನುಮೋದನೆ ಪಡೆದಿರುವ ಎರಡು ಲಸಿಕೆಗಳು ಭಾರತದಲ್ಲೇ ತಯಾರಿಸಲಾಗಿದೆ ಎನ್ನುವ ವಿಚಾರ ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆಪಡುವಂತೆ ಮಾಡಿದೆ. ಇದು ಆತ್ಮನಿರ್ಭರ ಭಾರತದ ಕನಸನ್ನು ಈಡೇರಿಸಲು ನಮ್ಮ ವೈಜ್ಞಾನಿಕ  ಸಮುದಾಯದ ಉತ್ಸಾಹವನ್ನು ತೋರಿಸುತ್ತದೆ. ಇದರ ಮೂಲದಲ್ಲಿ ಕಾಳಜಿ ಹಾಗೂ ಸಹಾನುಭೂತಿ ಇದೆ ಎಂದು ಪ್ರಧಾನಿ ಟ್ವೀಟಿಸಿದ್ದಾರೆ.

ಕೊರೋನ ವಿರುದ್ಧ ಚಿಕಿತ್ಸೆಗಾಗಿ ಎರಡು ಲಸಿಕೆಗಳಿಗೆ ಅನುಮೋದನೆ ನೀಡಿರುವುದು ಈ ಸೋಂಕಿನ ವಿರುದ್ಧದ ಹೋರಾಟದಲ್ಲಿ ನಿರ್ಣಾಯಕ ತಿರುವು. ಈ ಲಸಿಕೆಗೆ ಅನುಮೋದನೆ ನೀಡಿರುವುದು ದೇಶವನ್ನು ಕೋವಿಡ್ 19 ಮುಕ್ತವಾಗಿಸುವ ಪ್ರಕ್ರಿಯೆಯನ್ನು ಇನ್ನಷ್ಟು ಚುರುಕುಗೊಳಿಸಲಿದೆ ಎಂದು ಪ್ರಧಾನಿ ಪ್ರತಿಪಾದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News