ಕೋವ್ಯಾಕ್ಸಿನ್ ಲಸಿಕೆ ಬಳಕೆಗೆ ಅನುಮತಿ ಅಪಾಯಕಾರಿಯಾಗಬಲ್ಲದು: ಶಶಿ ತರೂರ್

Update: 2021-01-03 09:44 GMT

ಹೊಸದಿಲ್ಲಿ:ಭಾರತೀಯ ವೈದ್ಯಕೀಯ ಪರಿಷತ್(ಐಸಿಎಂಆರ್)ಸಹಯೋಗದಲ್ಲಿ ಭಾರತ್ ಬಯೋಟೆಕ್ ದೇಶೀಯವಾಗಿ ಅಭಿವೃದ್ದಿಪಡಿಸಿರುವ  ಕೋವ್ಯಾಕ್ಸಿನ್ ಲಸಿಕೆಗೆ ಭಾರತೀಯ ಪ್ರಧಾನ ಔಷಧ ನಿಯಂತ್ರಕ(ಡಿಸಿಜಿಐ)ತುರ್ತು ಪರಿಸ್ಥಿತಿಯಲ್ಲಿ ಬಳಕೆಗೆ ಅನುಮೋದನೆ ನೀಡಿರುವುದನ್ನು ಕಾಂಗ್ರೆಸ್ ಸಂಸದ ಶಶಿ ತರೂರ್ ಪ್ರಶ್ನಿಸಿದ್ದಾರೆ.
ಕೋವ್ಯಾಕ್ಸಿನ್ ಇನ್ನೂ 3ನೇ ಹಂತದ ಪ್ರಯೋಗವನ್ನು ಮುಗಿಸಿಲ್ಲ. ಈ ನಿರ್ಧಾರವು ಅಕಾಲಿಕವಾಗಿದ್ದು, ಅಪಾಯಕಾರಿ ಎನಿಸಿಕೊಳ್ಳಬಹುದು ಎಂದು ಎಚ್ಚರಿಸಿದ್ದಾರೆ.
 ಈ ಕುರಿತಂತೆ ಟ್ವೀಟ್ ಮಾಡಿರುವ ಕಾಂಗ್ರೆಸ್ ಮುಖಂಡ ಶಶಿ ತರೂರ್, ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಅವರಿಂದಲೂ ಸ್ಪಷ್ಟನೆ ಬಯಸಿದ್ದಾರೆ.
ಸಂಪೂರ್ಣ ಕ್ಲಿನಿಕಲ್ ಪ್ರಯೋಗಗಳು ಮುಗಿಯುವವರೆಗೂ ಇದರ ಬಳಕೆಯನ್ನು ತಪ್ಪಿಸಬೇಕು. ಈ ಮಧ್ಯೆ ಆಸ್ಟ್ರಾಝೆನೆಕಾ ಲಸಿಕೆಯೊಂದಿಗೆ ಭಾರತ ಮುಂದುವರಿಯಬಹುದು ಎಂದು ತರೂರ್ ತಿಳಿಸಿದರು.
ರವಿವಾರ ಸೆರಂ ಇನ್ಸ್ ಸ್ಟಿಟ್ಯೂಟ್ ಆಫ್ ಇಂಡಿಯಾ ಹಾಗೂ ಭಾರತ್ ಬಯೋಟೆಕ್ ಸಂಸ್ಥೆಗಳಿಗೆ ತುರ್ತು ಪರಿಸ್ಥಿತಿಯಲ್ಲಿ ಷರತ್ತುಬದ್ದ ಲಸಿಕೆ ಬಳಕೆಗೆ ಡಿಸಿಜಿಐ ಅನುಮೋದನೆ ನೀಡಿತ್ತು. ಭಾರತ್ ಬಯೋಟೆಕ್ ಲಸಿಕೆಯ 3ನೇ ಹಂತದ ಪರಿಣಾಮಕಾರಿತ್ವದ ಅಂಕಿಅಂಶವು ಇನ್ನಷ್ಟೇ  ಹೊರಬರಬೇಕಾಗಿದೆ. ಅಲ್ಲದೆ 3ನೇ ಹಂತದ ಕ್ಲಿನಿಕಲ್ ಟ್ರಯಲ್ ಪ್ರೊಟೊಕಾಲ್ ನಡಸಲು ಡಿಸಿಜಿಐ ಅನುಮತಿ ನೀಡಿದೆ. 
.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News