ಕೊಚ್ಚಿ-ಮಂಗಳೂರು ನೈಸರ್ಗಿಕ ಅನಿಲ ಪೈಪ್ ಲೈನ್ ಮಂಗಳವಾರ ಪ್ರಧಾನಿಯಿಂದ ಲೋಕಾರ್ಪಣೆ

Update: 2021-01-03 12:13 GMT

ಹೊಸದಿಲ್ಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕೊಚ್ಚಿ-ಮಂಗಳೂರು ನೈಸರ್ಗಿಕ ಅನಿಲ ಪೈಪ್ ಲೈನ್ ನ್ನು ಮಂಗಳವಾರ ವೀಡಿಯೊ ಕಾನ್ಫರೆನ್ಸ್ ಮೂಲಕ ದೇಶಕ್ಕೆ ಅರ್ಪಿಸಲಿದ್ದಾರೆ.

ಒಂದು ರಾಷ್ಟ್ರ, ಒಂದು ಅನಿಲ್ ಗ್ರಿಡ್ ರಚನೆಗೆ ಈ ಕಾರ್ಯಕ್ರಮವು ಪ್ರಮುಖ ಮೈಲ್ಲುಗಲ್ಲಾಗಲಿದೆ ಎಂದು ಪ್ರಧಾನಮಂತ್ರಿ ಕಚೇರಿ ರವಿವಾರ ಹೇಳಿಕೆಯೊಂದರಲ್ಲಿ ತಿಳಿಸಿದೆ.

450 ಕಿ.ಮೀ.ಉದ್ದದ ಪೈಪ್ ಲೈನ್ ನ್ನು ಗೈಲ್ (ಇಂಡಿಯಾ)ಲಿಮಿಟೆಡ್ ನಿರ್ಮಿಸಿದೆ. ಯೋಜನೆಯ ಒಟ್ಟು ವೆಚ್ಚ 3,000 ಕೋ.ರೂ.

ಗ್ಯಾಸ್ ಪೈಪ್ ಲೈನ್ ಮನೆಮನೆಗಳಿಗೆ ಪರಿಸರ ಸ್ನೇಹಿ ಹಾಗೂ ಕೈಗೆಟುಕುವ ಇಂಧನವನ್ನು ಪೈಪ್ಡ್ ನ್ಯಾಚುರಲ್ ಗ್ಯಾಸ್(ಪಿಎನ್ ಜಿ)ರೂಪದಲ್ಲಿ ಹಾಗೂ ಸಿಎನ್ ಜಿಯನ್ನು ಸಾರಿಗೆ ಕ್ಷೇತ್ರಕ್ಕೆ ಪೂರೈಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News