ಸುಲಿಗೆ ಪ್ರಕರಣ: ಛೋಟಾ ರಾಜನ್, 3 ಸಹಚರರಿಗೆ 2 ವರ್ಷ ಜೈಲುಶಿಕ್ಷೆ

Update: 2021-01-04 17:22 GMT

ಮುಂಬೈ, ಜ.4: ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿ ಕುಖ್ಯಾತ ಕ್ರಿಮಿನಲ್ ಛೋಟಾ ರಾಜನ್ ಹಾಗೂ ಆತನ ಮೂವರು ಸಹಚರರಿಗೆ ಮುಂಬೈಯ ವಿಶೇಷ ಸಿಬಿಐ ನ್ಯಾಯಾಲಯ 2 ವರ್ಷ ಜೈಲುಶಿಕ್ಷೆ ವಿಧಿಸಿದೆ.

2015ರ ಅಕ್ಟೋಬರ್‌ನಲ್ಲಿ ಇಂಡೋನೇಶ್ಯಾದಲ್ಲಿ ಬಂಧಿಸಲ್ಪಟ್ಟ ರಾಜನ್‌ನನ್ನು ಭಾರತಕ್ಕೆ ಹಸ್ತಾಂತರಿಸಿದ ಬಳಿಕ ತಿಹಾರ್ ಜೈಲಿನಲ್ಲಿ ಇರಿಸಲಾಗಿತ್ತು. ಛೋಟಾ ರಾಜನ್‌ಗೆ ಕೊಲೆ, ಕೊಲೆ ಯತ್ನ, ಸುಲಿಗೆ ಹಾಗೂ ಕ್ರಿಮಿನಲ್ ಒಳಸಂಚು ಪ್ರಕರಣಕ್ಕೆ ಸಂಬಂಧಿಸಿ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಜೊತೆಗೆ, 2012ರಲ್ಲಿ ಮುಂಬೈ ಹೋಟೆಲ್ ಮಾಲಕರೊಬ್ಬರ ದೂರಿನಂತೆ ರಾಜನ್ ಹಾಗೂ ಇತರ 5 ಆರೋಪಿಗಳ ವಿರುದ್ಧ ದಾಖಲಿಸಿದ್ದ ಕೊಲೆಯತ್ನ ಮತ್ತು ಸುಲಿಗೆ ಪ್ರಕರಣದಲ್ಲಿ ಮುಂಬೈಯ ವಿಶೇಷ ನ್ಯಾಯಾಲಯ 8 ವರ್ಷದ ಜೈಲುಶಿಕ್ಷೆ ಮತ್ತು 5 ಲಕ್ಷ ರೂ. ದಂಡ ವಿಧಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News