ಚೆನ್ನೈ: ಲೀಲಾ ಪ್ಯಾಲೇಸ್ ಕೊರೋನ ಹಾಟ್‌ಸ್ಪಾಟ್

Update: 2021-01-04 17:28 GMT

ಚೆನ್ನೈ, ಜ. 4: ಚೆನ್ನೈಯ ಸ್ಟಾರ್ ಹೊಟೇಲ್ ಲೀಲಾ ಪ್ಯಾಲೇಸ್‌ನ 20 ಸಿಬ್ಬಂದಿಗೆ ಕೊರೋನ ಸೋಂಕು ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆ ಸೋಮವಾರ ತಿಳಿಸಿದೆ. ಐಟಿಸಿ ಗ್ರ್ಯಾಂಡ್ ಚೋಳಾದ ಬಳಿಕ ಕೊರೋನ ಸೋಂಕಿನ ಹಾಟ್‌ಸ್ಪಾಟ್ ಆಗುತ್ತಿರುವ ಚೆನ್ನೈನ ಎರಡನೇ ಐಷಾರಾಮಿ ಹೊಟೇಲ್ ಇದಾಗಿದೆ. ಲೀಲಾ ಪ್ಯಾಲೇಸ್‌ನ 232 ಸಿಬ್ಬಂದಿಯ ಮಾದರಿಯನ್ನು ಕೊರೋನ ಪರೀಕ್ಷೆಗೆ ಒಳಪಡಿಸಲಾಗಿತ್ತು. ಇವರಲ್ಲಿ 20 ಮಂದಿಯ ಮಾದರಿಯಲ್ಲಿ ಕೊರೋನ ಸೋಂಕು ದೃಢಪಟ್ಟಿದೆ ಎಂದು ಹಿರಿಯ ಆರೋಗ್ಯಾಧಿಕಾರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News