ಅನಿವಾಸಿ ಭಾರತೀಯರಿಗೆ ಮತದಾನ ವ್ಯವಸ್ಥೆ ಕಲ್ಪಿಸಲು ವಿದೇಶಾಂಗ ಸಚಿವಾಲಯ ಸಹಮತ

Update: 2021-01-05 07:43 GMT

ಹೊಸದಿಲ್ಲಿ,ಜ.05: ಅನಿವಾಸಿ ಭಾರತೀಯರಿಗೆ  ವಿದೇಶಗಳಿಂದಲೇ ಇಇಪಿಬಿಎಸ್ (ಇಲೆಕ್ಟ್ರಾನಿಕಲಿ ಟ್ರಾನ್ಸ್‍ಮಿಟೆಡ್ ಪೋಸ್ಟಲ್ ಬ್ಯಾಲೆಟ್ ಸಿಸ್ಟಂ) ಮೂಲಕ ಮತದಾನ ಮಾಡುವ  ಚುನಾವಣಾ ಆಯೋಗದ ಪ್ರಸ್ತಾವನೆಗೆ ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತನ್ನ ಸಹಮತ ವ್ಯಕ್ತಪಡಿಸಿದೆ. ಆದರೆ ಈ ವ್ಯವಸ್ಥೆಯನ್ನು ಜಾರಿಗೊಳಿಸುವ ಮುನ್ನ ಎಲ್ಲಾ ಸಂಬಂಧಿತರ ಜತೆ ಚರ್ಚೆ ನಡೆಸುವಂತೆ ಸಚಿವಾಲಯ ಸೂಚಿಸಿದೆ.

ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವು ಎನ್‍ಆರ್‌ಐ ಸಂಘಟನೆಗಳು ಹಾಗೂ ವಿವಿಧ ಇತರ ಇಲಾಖೆಗಳೊಡನೆ ಚರ್ಚೆ ನಡೆಸಲಿದೆ ಎಂಬ ಮಾಹಿತಿಯಿದೆ. ಇಟಿಪಿಬಿಎಸ್ ಸವಲತ್ತನ್ನು ಈಗಾಗಲೇ ಸೇನಾ ಮತ್ತು ಅರೆಸೇನಾ ಸಿಬ್ಬಂದಿಗಳು ಹಾಗೂ ವಿದೇಶಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸರಕಾರಿ ಸಿಬ್ಬಂದಿಗಳಿಗೆ ಒದಗಿಸಲಾಗುತ್ತಿದೆ.

ಭಾರತದ ಮತದಾರರ ಪಟ್ಟಿಯಲ್ಲಿ ಸುಮಾರು 1.17 ಲಕ್ಷ ಎನ್‍ಆರ್‍ಐ ಮತದಾರರ ಹೆಸರುಗಳೂ ನೋಂದಣಿಯಾಗಿವೆ. ಈ ವರ್ಷ ನಡೆಯಲಿರುವ ಅಸ್ಸಾಂ, ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡು ಹಾಗೂ ಪುದುಚ್ಚೇರಿ ವಿಧಾನಸಭಾ ಚುನಾವಣೆಗಳ  ಸಂದರ್ಭ ಅನಿವಾಸಿ ಭಾರತೀಯರಿಗೆ ಈ ಸವಲತ್ತನ್ನು ಒದಗಿಸಲು ಚುನಾವಣಾ ಆಯೋಗ ತಾಂತ್ರಿಕವಾಗಿ ಹಾಗೂ ಆಡಳಿತಾತ್ಮಕವಾಗಿ ಸಿದ್ಧವಿದೆ ಹಾಗೂ ಇದಕ್ಕಾಗಿ ಕಂಡಕ್ಟ್ ಆಫ್ ಇಲೆಕ್ಷನ್ ರೂಲ್ಸ್ 1961ರ ತಿದ್ದುಪಡಿಯಾಗಬೇಕಿದೆ ಎಂದು ಚುನಾವಣಾ ಆಯೋಗವು ಕಾನೂನು ಕಾರ್ಯದರ್ಶಿಗಳಿಗೆ ನವೆಂಬರ್ 27ರಂದು ಬರೆದ ಪತ್ರದಲ್ಲಿ ಹೇಳಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News