ಭಾರತ್‌ ಬಯೋಟೆಕ್‌ ಕೊರೋನಾ ಲಸಿಕೆಯ ಕುರಿತ ಅಪಾಯಕಾರಿ ಅಂಶಗಳನ್ನು ಬಿಚ್ಚಿಟ್ಟ ಆರ್ಟಿಐ ಕಾರ್ಯಕರ್ತ ಸಾಕೇತ್‌ ಗೋಖಲೆ

Update: 2021-01-06 09:11 GMT

ಭಾರತ್‌ ಬಯೋಟೆಕ್‌ ನ ಕೋರೋನ ಲಸಿಕೆ ಕೋವ್ಯಾಕ್ಸಿನ್‌ ಅನ್ನು ತುರ್ತು ಬಳಕೆಗಾಗಿ ಅನುಮೋದಿಸಲಾಗಿತ್ತು. ಇದೀಗ ಈ ಕುರಿತಾದಂತ ಕೆಲವು ಆಘಾತಕಾರಿ ಮಾಹಿತಿಗಳನ್ನು ಆರ್ಟಿಐ ಕಾರ್ಯಕರ್ತ ಸಾಕೇತ್‌ ಗೋಖಲೆ ಸಾಕ್ಷ್ಯಗಳೊಂದಿಗೆ ಸಾಮಾಜಿಕ ತಾಣದಲ್ಲಿ ಜನರ ಮುಂದಿಟ್ಟಿದ್ದಾರೆ. ಇದು ಸ್ವಲ್ಪ ದೀರ್ಘವಾಗಿರಬಹುದು. ಆದರೆ ದಯವಿಟ್ಟು ಇದನ್ನು ಓದಿ. ಈ ಮಾಹಿತಿ ಹೊರತೆಗೆಯಲು ಹಲವು ದಿನಗಳ ಕಾಲ ನಾನು ಅವಿರತ ಶ್ರಮ ಪಡಬೇಕಾಯಿತು ಹಾಗೂ ‌ʼಇದು ನಿಮ್ಮ ಜೀವಕ್ಕೆ ಸಂಬಂಧ ಪಟ್ಟಿದ್ದುʼ ಎಂದು ತಮ್ಮ ಬರಹವನ್ನು ಅವರು ಪ್ರಾರಂಭಿಸಿದ್ದಾರೆ.

"ಭಾರತ್‌ ಬಯೋಟೆಕ್‌ ತನ್ನ ಕೊವ್ಯಾಕ್ಸಿನ್‌ ಲಸಿಕೆಯ ಮೊದಲ ಮತ್ತು ೨ನೆ ಹಂತದ ಟ್ರಯಲ್‌ ಗಳಿಗಾಗಿ ಭಾರತದ ಕ್ಲಿನಿಕಲ್‌ ಟ್ರಯಲ್ಸ್‌ ರಿಜಿಸ್ಟರ್‌ ನ ಐಸಿಎಂಆರ್‌ ನ ಒಂದು ಘಟಕದಲ್ಲಿ ನೋಂದಣಿ ಮಾಡಿತ್ತು.  ಐಸಿಎಂಆರ್‌  ಭಾರತ್‌ ಬಯೋಟೆಕ್‌ ನ ಪಾಲುದಾರ ಕೂಡಾ ಹೌದು.

ನರೆಂದ್ರ ಮೋದಿಯ ವರ್ಚಸ್ಸು ಹೆಚ್ಚಾಗಲೆಂದು "ಲಸಿಕೆಯು ಸ್ವಾತಂತ್ರ್ಯ ದಿನದೊಳಗೆ ತಯಾರಾಗಬೇಕು" ಎಂದು ಎಂಸಿಆರ್‌ ಆಘಾತಕಾರಿ ಪತ್ರ ರವಾನಿಸಿದ ಸಂದರ್ಭದಲ್ಲೇ ಭಾರತ್‌ ಬಯೋಟೆಕ್‌ ನ ಫೇಸ್‌ 1 ಮಾಹಿತಿಗಳನ್ನು ಅಂದರೆ ಜುಲೈ ೧, 2020 ಕ್ಕೆ ರಿಜಿಸ್ಟರ್‌ ಮಾಡಲಾಗಿತ್ತು. ಇಲ್ಲಿ ಲಸಿಕೆಗಳ ಸ್ಯಾಂಪಲ್‌ ಗಳನ್ನು ಪಡೆದುಕೊಳ್ಳಲು ಒಟ್ಟು 1125 ಜನರನ್ನು ನೇಮಿಸಲಾಗಿತ್ತು.

ಭಾರತ್ ಬಯೋಟೆಕ್‍ನ ಫೇಸ್ 2 ಅಂದರೆ ಎರಡನೇ ಹಂತದ ಮಾಹಿತಿಗಳನ್ನು ಸೆಪ್ಟೆಂಬರ್ 8, 2020ರಲ್ಲಿ ರಿಜಿಸ್ಟರ್ ಮಾಡಲಾಗಿತ್ತು. ಇದು ಫೇಸ್ 1 ಟ್ರಯಲ್ ರಿಜಿಸ್ಟರ್ ಮಾಡಿದ ಕೇವಲ  2 ತಿಂಗಳೊಳಗೆ ನಡೆದಿತ್ತು. ಅಂದರೆ., ಫೇಸ್ 1  ಟ್ರಯಲ್ ಪೂರ್ಣಗೊಳ್ಳುವ ಮುನ್ನವೇ ಫೇಸ್ 2 ಟ್ರಯಲ್ ಅನ್ನು ರಿಜಿಸ್ಟರ್ ಮಾಡಲಾಗಿತ್ತು. ಅದೂ ಕೇವಲ 124 ಸ್ವಯಂಸೇವಕರು ಮಾತ್ರ ಇದರಲ್ಲಿ ಭಾಗವಹಿಸಿದ್ದರು ಎಂದು ದಾಖಲೆಗಳು ತಿಳಿಸಿದ್ದಾಗಿ ಸಾಖೇತ್‌ ಗೋಖಲೆ ಉಲ್ಲೇಖಿಸಿದ್ದಾರೆ.

ಸಮರ್ಪಕ ದಾಖಲೆಗಳ ಪ್ರಕಾರ, ಜುಲೈ 2020ರಲ್ಲಿ ನಡೆದಿದ್ದ ಮೊದಲ ಹಂತದ ಟ್ರಯಲ್‌ ನ ನೋಂದಣಿಯು ಮಾರ್ಚ್‌ 2021ರೊಳಗೆ ಪೂರ್ತಿಗೊಳ್ಳಬೇಕಿತ್ತು. ಎರಡನೇ ಹಂತದ ಟ್ರಯಲ್‌ ಅನ್ನು ಸೆ.8, 2020 ರಲ್ಲಿ ನೋಂದಣಿ ಮಾಡಿದ್ದು, ಒಂದು ವರ್ಷ ಮತ್ತು ಮೂರು ತಿಂಗಳು ಅಂದರೆ 2021ರ ಡಿಸೆಂಬರ್‌ ವರೆಗೆ ಈ ಟ್ರಯಲ್‌ ನಡೆಯಬೇಕಿತ್ತು. ಇನ್ನು ಕೊವ್ಯಾಕ್ಸಿನ್‌ ನ ಮೂರನೇ ಟ್ರಯಲ್‌ ನ.9 2020 ರಂದು ನೋಂದಣಿ ಮಾಡಲಾಗಿತ್ತು. 25,800 ಮಂದಿಯನ್ನು ಬಳಸಿ ಟ್ರಯಲ್‌ ನಡೆಸಲಾಗುವುದು ಎಂದು ಇದರಲ್ಲಿ ಉಲ್ಲೇಖಿಸಲಾಗಿತ್ತು. 

ಮೂರನೇ ಹಂತದ ಟ್ರಯಲ್‌ ಗೆ ಒಂದು ವರ್ಷವನ್ನು ನಿಗದಿಪಡಿಸಲಾಗಿದ್ದು, ಆದರೆ,  ಮೊದಲ ಹಂತದ ಪರೀಕ್ಷೆ ಮುಗಿಯುವ ಮೊದಲೇ 2 ಮತ್ತು 3ನೆ ಹಂತದ ಟ್ರಯಲ್‌ ಗಳನ್ನು ನೋಂದಣಿ ಮಾಡಲಾಗಿದೆ. ಇದು ನಿಜಕ್ಕೂ ಅಪಾಯಕಾರಿ ಅಂಶವಾಗಿದೆ ಎಂದು ಸಾಖೇತ್‌ ಗೋಖಲೆ ತಿಳಿಸಿದ್ದಾರೆ.

ಒಟ್ಟಾರೆಯಾಗಿ ಮೊದಲ ಹಂತವು ಮಾರ್ಚ್ 2021ರೊಳಗೆ ಪೂರ್ಣಗೊಳ್ಳಬೇಕಿದೆ. ಎರಡನೇ ಹಂತವು ಡಿಸೆಂಬರ್ 2021ರೊಳಗೆ ಪೂರ್ಣಗೊಳ್ಳಬೇಕಿದೆ. ಮೂರನೇ ಹಂತವು ನವೆಂಬರ್ 2021ರೊಳಗೆ ಪೂರ್ಣಗೊಳ್ಳಬೇಕಿದೆ (ಅಚ್ಚರಿಯೆಂದರೆ ಫೇಸ್ 2 ಪೂರ್ಣಗೊಳ್ಳುವುದಕ್ಕಿ ಒಂದು ತಿಂಗಳು ಮುಂಚಿತವಾಗಿ) ಆದರೂ ಭಾರತ್ ಬಯೋಟೆಕ್‍ನ್ ಕೊವ್ಯಾಕ್ಸಿನ್ ಲಸಿಕೆಗೆ ಭಾರತ ಸರಕಾರ ಜನವರಿ 2021ರಲ್ಲಿ ಅನುಮೋದನೆ ನೀಡಿದೆ.

ಇನ್ನು ಈ ಕುರಿತು ಹಲವಾರು ಪ್ರಶ್ನೆಗಳನ್ನು ಸಾಖೇತ್‌ ಗೋಖಲೆ ಜನರ ಮತ್ತು ಸರಕಾರದ ಮುಂದಿಟ್ಟಿದ್ದಾರೆ.

ಭಾರತ್ ಬಯೋಟೆಕ್‍ನ ಸ್ವಂತ ರಿಜಿಸ್ಟ್ರೇಶನ್ ದಾಖಲೆಗಳಲ್ಲಿ ಫೇಸ್ 1 ಪೂರ್ಣಗೊಳ್ಳುವಿಕೆಗೆ ಇನ್ನೂ 3 ತಿಂಗಳುಗಳಿರುವಾಗ ಯಾವ ಆಧಾರದಲ್ಲಿ ಅನುಮೋದನೆ ನೀಡಲಾಗಿದೆ?

ಭಾರತ್ ಬಯೋಟೆಕ್‍ನ ಫೇಸ್ 1 ಹಾಗೂ 2 ಟ್ರಯಲ್‍ಗಳ ಮಾಹಿತಿಯನ್ನು ಸಾರ್ವಜನಿಕವಾಗಿ ಶೇರ್ ಮಾಡಲು ಮೋದಿ ಸರಕಾರಕ್ಕೆ ಇದೇ ಕಾರಣದಿಂದ ಹಿಂಜರಿಕೆಯಿದೆಯೇ?

1.3 ಬಿಲಿಯನ್‌ ನಷ್ಟು ಜನಸಂಖ್ಯೆಯಿರುವ ಭಾರತದಲ್ಲಿ ಕೇವಲ 1249 ಮಂದಿ ಸ್ವಯಂ ಸೇವಕರನ್ನು ಬಳಸಿಕೊಂಡು ಹೇಗೆ ಟ್ರಯಲ್‌ ನಡೆಸುತ್ತಾರೆ?

ಪರಿಸ್ಥಿತಿ ಹೀಗಿರುವಾಗ ಈ ಲಸಿಕೆಯು 110% ಸುರಕ್ಷಿತ ಹಾಗೂ ಕೋವಿಡ್‌ ನ ರೂಪಾಂತರಿ ವೈರಸ್‌ ವಿರುದ್ಧ ಇದು ಕೆಲಸ ನಿರ್ವಹಿಸುತ್ತದೆ ಎಂದು ಯಾವ ಆಧಾರದ ಮೇಲೆ ಹೇಳುತ್ತೀರಿ?

ಇದನ್ನೆಲ್ಲಾ ಸಾಬೀತುಪಡಿಸಲು ಮೊದಲ ಹಂತದ ಹಾಗೂ ಎರಡನೇ ಹಂತದ ಅಂಕಿ ಅಂಶಗಳು ಎಲ್ಲಿವೆ?

ಕೂಡಲೇ ಕೇಂದ್ರ ಸರಕಾರವು ಕೊವ್ಯಾಕ್ಸಿನ್‌ ಟ್ರಯಲ್‌ ನ ಮೊದಲ ಹಂತ ಹಾಗೂ ಎರಡನೇ ಹಂತದ ಅಂಕಿ ಅಂಶಗಳನ್ನು ಬಿಡುಗಡೆ ಮಾಡಬೇಕು. ಒಂದೂವರೆ ವರ್ಷದಲ್ಲಿ ಮಗಿಯಬೇಕಿದ್ದ ಟ್ರಯಲ್‌ ಗಳು ಕೇವಲ 5 ತಿಂಗಳಿನಲ್ಲಿ ಹೇಗೆ ಮುಗಿಯಿತು ಅನ್ನುವುದನ್ನು ವಿವರಿಸಬೇಕು. ನೀವು ಮಾಹಿತಿಗಳನ್ನು ಬಹಿರಂಗ ಮಾಡುವಲ್ಲಿ ತೋರುವ ಹಿಂಜರಿಕೆಯು ನಿಜಕ್ಕೂ ಅಪಾಯಕಾರಿಯಾಗಿದೆ ಎಂದು ಹೇಳಿರುವ ಸಾಖೇತ್‌ ಗೋಖಲೆ ತಾವು ಉಲ್ಲೇಖಿಸಿದ ಎಲ್ಲಾ ವಿಚಾರಗಳಿಗೂ ಈ ಕೆಳಗಿನ ದಾಖಲೆಗಳನ್ನೂ ನೀಡಿದ್ದಾರೆ. 

http://ctri.nic.in/Clinicaltrials/showallp.php

http://ctri.nic.in/Clinicaltrials/pmaindet2.php

http://ctri.nic.in/Clinicaltrials/pmaindet2.php

ಸಾಕೇತ್‌ ಗೋಖಲೆಯವರ ಫೇಸ್‌ ಬುಕ್‌ ಪೋಸ್ಟ್‌ ಇಲ್ಲಿದೆ.

This may be a bit long but PLEASE read this. It took me days of back breaking effort to dig this out & it concerns your...

Posted by Saket Gokhale on Tuesday, 5 January 2021

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News