×
Ad

ಉ.ಪ್ರ. ಸರಕಾರವನ್ನು ಹೊಗಳುವ ʼಜಾಹೀರಾತು ಲೇಖನ'ವನ್ನು ನಿಜ ಸುದ್ದಿಯೆಂದೇ ಪ್ರಕಟಿಸಿದ ಮಾಧ್ಯಮಗಳು

Update: 2021-01-07 19:00 IST

ಹೊಸದಿಲ್ಲಿ,ಜ.07: ಟೈಮ್ ಮ್ಯಾಗಝಿನ್‍ನ ಹೊಸ ಆವೃತ್ತಿಯಲ್ಲಿ ಉತ್ತರ ಪ್ರದೇಶದ ಆದಿತ್ಯನಾಥ್ ನೇತೃತ್ವದ ಸರಕಾರದ ಕೋವಿಡ್ ನಿರ್ವಹಣೆಯನ್ನು ಶ್ಲಾಘಿಸಿ ಪ್ರಕಟವಾದ ಜಾಹೀರಾತು (ಸ್ಪಾನ್ಸರ್ಡ್) ಲೇಖನವನ್ನು ನಿಜವಾದ ಸುದ್ದಿ ಎಂದು ಪ್ರಕಟಿಸಿ ಹಲವಾರು ಹಿಂದಿ ಸುದ್ದಿ ತಾಣಗಳಾದ ಝೀ ನ್ಯೂಸ್, ಪತ್ರಿಕಾ, ನ್ಯೂಸ್ 18 ಯುಪಿ, ಟಿವಿ9 ಭಾರತ್ ವರ್ಷ್ ಬೇಸ್ತು ಬಿದ್ದಿವೆ ಎಂದು boomlive.in ವರದಿ ಮಾಡಿದೆ.

 ಈ ಲೇಖನದ ಕುರಿತು ಸ್ಪಷ್ಟೀಕರಣಕ್ಕಾಗಿ ಬೂಮ್‍ ಲೈವ್ ವೆಬ್ ತಾಣವು ಟೈಮ್ ಮ್ಯಾಗಝಿನ್  ಅಧಿಕಾರಿಗಳನ್ನು ಸಂಪರ್ಕಿಸಿದಾಗ ಸಂಸ್ಥೆಯ ಡೈರೆಕ್ಟರ್ ಆಫ್ ಕಮ್ಯುನಿಕೇಶನ್ಸ್ ಕಳುಹಿಸಿದ ಇ-ಮೇಲ್ ಉತ್ತರದಲ್ಲಿ ಇದೊಂದು ʼಪ್ರಾಯೋಜಿತ ಲೇಖನʼ ಎಂದು ಸ್ಪಷ್ಟ ಪಡಿಸಲಾಗಿದೆ.

ಲೇಖನದ  ಮೂರು ಬದಿಗಳಲ್ಲಿ `ಕಂಟೆಂಟ್ ಫ್ರಮ್ ಉತ್ತರ ಪ್ರದೇಶ್' ಎಂದು ಬರೆಯಲಾಗಿರುವುದು ಕಾಣಿಸುತ್ತದೆಯಾದರೂ ಇದೊಂದು ಪ್ರಾಯೋಜಿತ ಲೇಖನವೆಂಬುದು ತಕ್ಷಣಕ್ಕೆ ತಿಳಿಯುವುದಿಲ್ಲ. ಮೇಲಾಗಿ ಈ ಲೇಖನದಲ್ಲಿ ಯಾವುದೇ ಬೈಲೈನ್ ಅಥವಾ ಲೇಖಕರ ಹೆಸರಿಲ್ಲ ಹಾಗೂ ಮ್ಯಾಗಝಿನ್‍ನ ಇಂಡೆಕ್ಸ್ ಪುಟದಲ್ಲೂ ಈ ಲೇಖನವನ್ನು ನಮೂದಿಸಿಲ್ಲ.

`ಹ್ಯಾಂಗ್ ಇನ್ ದೇರ್, ಬೆಟರ್ ಟೈಮ್ಸ್ ಆರ್ ಅಹೆಡ್' ಎಂಬ ಶೀರ್ಷಿಕೆಯ ಈ ನಿರ್ದಿಷ್ಟ ಲೇಖನ ಟೈಮ್ ಮ್ಯಾಗಝಿನ್‍ನ ಸೌತ್ ಏಷ್ಯಾ ಆವೃತ್ತಿಯಲ್ಲಿ (ಡಿಸೆಂಬರ್ 21-28,2020) ಪ್ರಕಟಗೊಂಡಿದೆ.

ಉತ್ತರ ಪ್ರದೇಶದ ಆದಿತ್ಯನಾಥ್ ಸರಕಾರ ಕೋವಿಡ್ ಸಮಯವನ್ನು ನಿರ್ವಹಿಸಿದ ರೀತಿ, ಲಾಕ್ ಡೌನ್ ಸಂದರ್ಭ ಕೈಗೊಂಡ ಕ್ರಮಗಳು, ವಲಸಿಗ ಕಾರ್ಮಿಕರ ಸಮಸ್ಯೆಯನ್ನು ಪರಿಹರಿಸಿದ ರೀತಿ, ಹೀಗೆ ಸರಕಾರವನ್ನು ಲೇಖನದಲ್ಲಿ ಹಾಡಿ ಹೊಗಳಲಾಗಿದೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News