38 ಮಹಿಳೆಯರು, ಮಕ್ಕಳ ಅಪಹರಣ

Update: 2021-01-07 17:25 GMT

ಜೈಪುರ, ಜ.7: ಮಾರಕಾಯುಧ ಹೊಂದಿದ್ದ ದುಷ್ಕರ್ಮಿಗಳ ಗುಂಪೊಂದು ಗ್ರಾಮಕ್ಕೆ ನುಗ್ಗಿ 38 ಮಹಿಳೆಯರು ಹಾಗೂ ಮಕ್ಕಳನ್ನು ಅಪಹರಿಸಿದ ಘಟನೆ ರಾಜಸ್ಥಾನದ ಬಾಮನ್ ದೇವರಿಯಾನ್ ಗ್ರಾಮದಲ್ಲಿ ವರದಿಯಾಗಿದೆ. ಅಪಹೃತರನ್ನು ರಕ್ಷಿಸಿದ್ದು 6 ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಸುಮಾರು 100ರಷ್ಟು ದುಷ್ಕರ್ಮಿಗಳು ಮಧ್ಯಪ್ರದೇಶದ ಕಲ್ಸಿಯಾ ಗ್ರಾಮದಿಂದ ಬಸ್ಸು ಹಾಗೂ ಇತರ ವಾಹನದಲ್ಲಿ ಆಗಮಿಸಿದ್ದು ಕತ್ತಿ, ಖಡ್ಗ ಮತ್ತಿತರ ಮಾರಕಾಯುಧಗಳನ್ನು ಹೊಂದಿದ್ದರು. ಬಾಮನ್ ದೇವರಿಯಾನ್ ಗ್ರಾಮಕ್ಕೆ ನುಗ್ಗಿ ಮಹಿಳೆಯರು ಹಾಗೂ ಮಕ್ಕಳನ್ನು ಅಪಹರಿಸಿದ್ದಾರೆ ಎಂದು ಪೊಲೀಸ್ ಅಧೀಕ್ಷಕ ಡಾ ಕಿರಣ್ ಸಿಂಧು ಹೇಳಿದ್ದಾರೆ.

ಮಾಹಿತಿ ತಿಳಿದ ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಅಪಹರಣಕಾರರ ವಶದಲ್ಲಿದ್ದವರನ್ನು ರಕ್ಷಿಸಿದ್ದಾರೆ. 6 ಮಂದಿಯನ್ನು ಬಂಧಿಸಿದ್ದು ಉಳಿದವರು ಪರಾರಿಯಾಗಿದ್ದಾರೆ. ಆರೋಪಿಗಳ ವಿರುದ್ಧ ಎಸ್‌ಸಿ/ಎಸ್ಟಿ ದೌರ್ಜನ್ಯತಡೆ ಕಾಯ್ದೆ ಮತ್ತು ಶಸ್ತ್ರಾಸ್ತ್ರ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News