ಉ.ಪ್ರದೇಶ: ವಾಹನಗಳಲ್ಲಿ ಜಾತಿಸೂಚಕ ಸ್ಟಿಕರ್ ಬಳಕೆ; ಕಠಿಣ ಕ್ರಮದ ಎಚ್ಚರಿಕೆ

Update: 2021-01-10 18:05 GMT

ಲಕ್ನೊ, ಜ.10: ತಮ್ಮ ವಾಹನಗಳ ಮೇಲೆ ಜಾತಿಸೂಚಕ ಸ್ಟಿಕರ್ ಅಂಟಿಸಿರುವ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿರುವ ಉತ್ತರಪ್ರದೇಶ ಪೊಲೀಸರು, ಶನಿವಾರ ನೋಯ್ಡಾ ಮತ್ತು ಗ್ರೇಟರ್ ನೋ ನೋಯ್ಡಾ ಪ್ರದೇಶದಲ್ಲಿ ಸುಮಾರು 600 ವಾಹನ ಸವಾರರಿಗೆ ಈ ನಿಟ್ಟಿನಲ್ಲಿ ನೋಟಿಸ್ ನೀಡಲಾಗಿದೆ ಎಂದಿದ್ದಾರೆ.

ಜಾಟ್, ಗುರ್ಜಾರ್, ಯಾದವ್, ಬ್ರಾಹ್ಮಣ, ಪಂಡಿತ್, ಕ್ಷತ್ರೀಯ, ಲೋಧಿ ಮತ್ತು ಮೌರ್ಯ ಜಾತಿಯ ಸ್ಥಾನಮಾನವನ್ನು ವೈಭವೀಕರಿಸುವ ಸ್ಟಿಕರ್‌ಗಳನ್ನು ವಾಹನಗಳಲ್ಲಿ ಅಂಟಿಸುವ ಪ್ರಕ್ರಿಯೆ ಉತ್ತರಪ್ರದೇಶದಲ್ಲಿ ಸಾಮಾನ್ಯವಾಗಿದೆ. ಇಂತಹ ವಾಹನಗಳನ್ನು ಮುಟ್ಟುಗೋಲು ಹಾಕಿಕೊಳ್ಳುವುದಾಗಿ ರಾಜ್ಯ ಸಾರಿಗೆ ಇಲಾಖೆ ಈ ಹಿಂದೆ ಹೇಳಿತ್ತು. ಗೌತಮಬುದ್ಧ ನಗರ ಪೊಲೀಸ್ ಆಯುಕ್ತರ ಸೂಚನೆಯಂತೆ ಆರಂಭಿಸಲಾದ ಅಭಿಯಾನದಂತೆ ಶನಿವಾರ ನಡೆದ ಕಾರ್ಯಾಚರಣೆಯಲ್ಲಿ 594 ವಾಹನಗಳ ಮೇಲೆ ಅಂಟಿಸಿದ್ದ ಜಾತಿಸೂಚಕ ಸ್ಟಿಕರ್ ಅನ್ನು ಅಳಿಸಲಾಗಿದ್ದು ನೋಟಿಸ್ ನೀಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News