×
Ad

ಪ್ರಧಾನಿ ಬಗ್ಗೆ ಟ್ವೀಟ್: ಮಾಜಿ ವಾಯುಸೇನಾ ಯೋಧ, ಪೈಲಟ್ ನನ್ನು ವಜಾ ಮಾಡಿದ ಗೋ ಏರ್

Update: 2021-01-10 23:57 IST

 ಹೊಸದಿಲ್ಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು 'ಈಡಿಯಟ್' ಎಂದು ಕರೆದಿರುವುದಕ್ಕೆ ಮಾಜಿ ವಾಯುಸೇನಾ ಯೋಧ,ಹಿರಿಯ ಪೈಲಟ್ ರನ್ನು ಗೋ ಏರ್ ಸಂಸ್ಥೆಯು  ಉಚ್ಚಾಟಿಸಿದ ಕೆಲವೇ ಗಂಟೆಗಳ ಬಳಿಕ 'ಈಡಿಯಟ್' ಪದವು ಟ್ವಿಟ್ಟರ್‌ನಲ್ಲಿ ಟಾಪ್ ಟ್ರೆಂಡ್ ಆಗಿ ಹೊರಹೊಮ್ಮಿದೆ. ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ವಿಮಾನಯಾನ ಸಂಸ್ಥೆಯನ್ನು ಮೀಮ್ಸ್ ಹಾಗೂ ಜೋಕ್‌ಗಳ ಮೂಲಕ ಗುರಿ ಮಾಡಿದರು.

ಗೋ ಏರ್ ವಿಮಾನ ಸಂಸ್ಥೆಯ ವಿರುದ್ಧ ಟ್ವಿಟ್ಟರಿಗರ ಆಕ್ರೋಶ ಎಷ್ಟಿತ್ತೆಂದರೆ 'ಈಡಿಯಟ್' ಪದವು ಟ್ವಿಟ್ಟರ್‌ನಲ್ಲಿ ಬಹುಬೇಗನೆ ಟ್ರೆಂಡ್ ಆಗಿ ಬದಲಾಯಿತು.

   ಕ್ಯಾಪ್ಟನ್ ಮಿಕಿ ಮಲಿಕ್ ಗುರುವಾರ ಮಾಡಿದ್ದ ವಿವಾದಾತ್ಮಕ ಟ್ವೀಟ್ ನಲ್ಲಿ ಪ್ರಧಾನಿ ಮೋದಿ ಯವರನ್ನು 'ಈಡಿಯಟ್' ಎಂದು ಕರೆದಿದ್ದರು. "ಪ್ರಧಾನಮಂತ್ರಿ ಈಡಿಯಟ್, ನೀವು ನನ್ನನ್ನು ಹೀಗೆಯೇ ಕರೆಯಬಹುದು. ಅದರಿಂದ ನನಗೇಗೂ ತೊಂದರೆ ಇಲ್ಲ. ಏಕೆಂದರೆ ನಾನು ಪ್ರಧಾನಿ ಅಲ್ಲ. ಆದರೆ ಪ್ರಧಾನಿ ಈಡಿಯಟ್ ಆಗಿದ್ದಾರೆ'' ಎಂದು ಟ್ವಿಟಿಸಿದ್ದರು. ಆ ನಂತರ ಅವರು ತಮ್ಮ ಟ್ವೀಟಿಗೆ ಕ್ಷಮೆಯಾಚಿಸಿದ್ದರು.

ಏರ್ ಲೈನ್ ಕಂಪೆನಿಯ ನಿರ್ಧಾರಕ್ಕೆ ಟ್ವಿಟ್ಟರಿಗೆ ಪ್ರತಿಕ್ರಿಯೆ ಹೀಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News