ಮನೆಯೊಳಗೆ ನುಗ್ಗಿ ಬಾಲಕಿಯ ಅತ್ಯಾಚಾರ
ಹೊಸದಿಲ್ಲಿ: ನೆರೆಮನೆಯಲ್ಲಿ ವಾಸವಾಗಿದ್ದ ವ್ಯಕ್ತಿಯೊಬ್ಬ ಮನೆಯೊಳಗೆ ನುಗ್ಗಿ ಪಿಸ್ತೂಲ್‍ನಿಂದ ಬೆದರಿಸಿ 14ರ ಬಾಲಕಿಯನ್ನು ಅತ್ಯಾಚಾರ ನಡೆಸಿರುವ ಆಘಾತಕಾರಿ ಘಟನೆ ಗ್ರೇಟರ್ ನೊಯ್ಡಾದಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಘಟನೆಯು ಗ್ರೇಟರ್ ನೊಯ್ಡಾದ ರಬುಪುರಾ ವಲಯದಲ್ಲಿ ನಡೆದಿದೆ.
ರೈತನ ಮಗಳಾಗಿರುವ ಬಾಲಕಿ ತನ್ನ ಸಹೋದರಿಯೊಂದಿಗೆ ರಾತ್ರಿ ಮಲಗಿದ್ದ ಸಮಯದಲ್ಲಿ ನೆರೆಮನೆಯಲ್ಲಿ ವಾಸವಾಗಿದ್ದ ವ್ಯಕ್ತಿಯೊಬ್ಬ ಮನೆಯೊಳಗೆ ನುಗ್ಗಿ ಅತ್ಯಾಚಾರ ಎಸಗಿದ್ದಾನೆ.
ಆರೋಪಿಯು ತನ್ನೊಂದಿಗೆ ದೇಶೀ ನಿರ್ಮಿತ ಪಿಸ್ತೂಲ್ ನ್ನು ಇಟ್ಟುಕೊಂಡಿದ್ದ. ಪಿಸ್ತೂಲ್ ತೋರಿಸಿ ಬಾಲಕಿಯನ್ನು ಅತ್ಯಾಚಾರ ನಡೆಸಿದ್ದಾನೆ ಎಂದು ಸಂತ್ರಸ್ತ ಕುಟುಂಬದ ಸದಸ್ಯರು ತಿಳಿಸಿದ್ದಾರೆ.
ಬಾಲಕಿ ಕಿರುಚಾಡಿದ್ದನ್ನು ನೋಡಿ ಮನೆಯವರು ನಿದ್ದೆಯಿಂದ ಎಚ್ಚರಗೊಂಡರು. ತಕ್ಷಣವೇ ಆರೋಪಿಯನ್ನು ಹಿಡಿದು ಚೆನ್ನಾಗಿ ಥಳಿಸಿದ್ದಾರೆ.
ಗ್ರೇಟರ್ ನೊಯ್ಡಾ ಪೊಲೀಸ್ ಠಾಣೆಯಲ್ಲಿ ಬಾಲಕಿಯ ಕುಟುಂಬದವರು ದೂರು ದಾಖಲಿಸಿದ್ದಾರೆ. ಆ ಬಳಿಕ ಅತ್ಯಾಚಾರ ಪ್ರಕರಣವನ್ನು ದಾಖಲಾಗಿದೆ. ಆರೋಪಿಯನ್ನು ಬಂಧಿಸಲಾಗಿದೆ.
ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗಾಗಿ ಕಳುಹಿಸಿಕೊಡಲಾಗಿದ್ದು, ಅತ್ಯಾಚಾರವಾಗಿರುವುದು ದೃಢಪಟ್ಟಿದೆ.