ಮಹಾರಾಷ್ಟ್ರ ಸಚಿವನ ವಿರುದ್ದ ಅತ್ಯಾಚಾರ ಆರೋಪ: ಪಕ್ಷ ಸೂಕ್ತ ಕ್ರಮಕೈಗೊಳ್ಳಲಿದೆ ಎಂದ ಶರದ್ ಪವಾರ್

Update: 2021-01-14 13:45 GMT

ಹೊಸದಿಲ್ಲಿ: ಪಕ್ಷದ ಹಿರಿಯ ಮುಖಂಡ ಹಾಗೂ ಮಹಾರಾಷ್ಟ್ರ ರಾಜ್ಯದ ಸಾಮಾಜಿಕ ನ್ಯಾಯ ಸಚಿವ ಧನಂಜಯ ಮುಂಢೆ ವಿರುದ್ದ ಕೇಳಿಬಂದಿರುವ ಅತ್ಯಾಚಾರ ಆರೋಪ ಗಂಭೀರ ವಿಚಾರವಾಗಿದೆ. ಈ ಕುರಿತು ಪಕ್ಷ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ರಾಷ್ಟ್ರೀಯ ಕಾಂಗ್ರೆಸ್ ಪಕ್ಷ(ಎನ್ ಸಿಪಿ)ವರಿಷ್ಟ ಶರದ್ ಪವಾರ್ ಗುರುವಾರ ಹೇಳಿದ್ದಾರೆ.

ಎನ್ ಸಿಪಿಯ ಉನ್ನತ ನಾಯಕರುರೊಂದಿಗೆ ಸಭೆ ನಡೆಸಿದ ಬಳಿಕವಷ್ಟೇ ಮುಂಢೆ ಅವರ ಭವಿಷ್ಯದ ಕುರಿತು ಅಧಿಕೃತವಾಗಿ ನಿರ್ಧಾರ ಕೈಗೊಳ್ಳಲಾಗುವುದು. ಆರೋಪ ಗಂಭೀರವಾದುದು. ಸಹಜವಾಗಿ ಪಕ್ಷ ನಿರ್ಧಾರ ತೆಗೆದುಕೊಳ್ಳಲಿದೆ. ಈ ವಿಚಾರದ ಕುರಿತು ಪಕ್ಷದ ನಾಯಕರಲ್ಲಿ ಮಾತನಾಡಿಲ್ಲ. ಈ ಕುರಿತು ಶೀಘ್ರವೇ  ನಿರ್ಧಾರ ಕೈಗೊಳ್ಳುವೆ ಎಂದು ಶರದ್ ಪವಾರ್ ಹೇಳಿದರು.

ಮಹಿಳೆಯೊಬ್ಬರು ಸಚಿವ ಧನಂಜಯ ವಿರುದ್ದ ಅತ್ಯಾಚಾರದ ಆರೋಪ ಹೊರಿಸಿದ್ದಾರೆ. ಈ ಆರೋಪವನ್ನು ನಿರಾಕರಿಸಿರುವ ಸಚಿವರು ಮಹಿಳೆ ತನಗೆ ಬ್ಲಾಕ್ಮೇಲ್ ಮಾಡುತ್ತಿರುವುದಾಗಿ ಪ್ರತ್ಯಾರೋಪ ಮಾಡಿದರು. ಪ್ರತಿಪಕ್ಷ ಬಿಜೆಪಿ ಧನಂಜಯ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದೆ. ಮುಂಢೆ ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರನ್ನು ಬುಧವಾರ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

ಆ ಮಹಿಳೆ ನನಗೂ ಬ್ಲಾಕ್ಮೇಲ್ ಮಾಡಿದ್ದಳು: ಬಿಜೆಪಿ ನಾಯಕ ಕೃಷ್ಣ ಹೆಗ್ಡೆ

ಮಹಾರಾಷ್ಟ್ರ ಸಚಿವ ಧನಂಜಯ ಮುಂಢೆ ವಿರುದ್ದ ಅತ್ಯಾಚಾರ ಆರೋಪಕ್ಕೆ ಗುರುವಾರ ಹೊಸ ತಿರುವು ಲಭಿಸಿದೆ.

ಮುಂಢೆ ಮೇಲೆ ಆರೋಪ ಹೊರಿಸಿರುವ ಮಹಿಳೆ ನನ್ನ ಮೇಲೂ ಇದೇ ರೀತಿಯ ಆರೋಪ ಮಾಡಿದ್ದು, ಈ ಕುರಿತು ಪೊಲೀಸರಿಗೆ ದೂರು ನೀಡಿದ್ದೇನೆ ಎಂದು ಪ್ರತಿಪಕ್ಷ ಬಿಜೆಪಿಯ ನಾಯಕ ಕೃಷ್ಣ ಹೆಗ್ಡೆ ಹೇಳಿದ್ದಾರೆ.

ಮಾಜಿ ಕಾಂಗ್ರೆಸ್ ನಾಯಕರಾಗಿರುವ 4  ವರ್ಷಗಳ ಹಿಂದೆ ಬಿಜೆಪಿಗೆ ಸೇರಿರುವ ಹೆಗ್ಡೆ, "ನನ್ನ ಮೂಲಗಳ ಪ್ರಕಾರ ಆಕೆ ಹನಿಟ್ರ್ಯಾಪ್ ನಡೆಸುವ ಸಂಶಯಾಸ್ಪದ ವ್ಯಕ್ತಿ ಎಂದು ನಾನು ಕಂಡುಕೊಂಡೆ. ನಾನು ಆಕೆಯನ್ನು ಭೇಟಿಯಾಗುವುದನ್ನು ಸಂಪೂರ್ಣ ನಿಲ್ಲಿಸಿದೆ. ಇನ್ನೂ ಕೆಲವು ವ್ಯಕ್ತಿಗಳನ್ನು ಹನಿ ಟ್ರ್ಯಾಪ್ ಗೆ ಸಿಲುಕಿಸಿ ಹಣ ಸುಲಿಗೆ ಮಾಡಲಾಗಿದೆ ಎಂಬ ಮಾಹಿತಿ ನನಗಿದೆ'' ಎಂದು ಪೊಲೀಸರಿಗೆ ಬರದ ಪತ್ರದಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News