ಅಮಿತಾಬ್ ಬಚ್ಚನ್ ಕೋವಿಡ್ ಕಾಲರ್ ಟ್ಯೂನ್ ಗೆ ಗುಡ್ ಬೈ, ಹೊಸ ಕಾಲರ್‌ ಟ್ಯೂನ್‌ ಆರಂಭ

Update: 2021-01-14 16:50 GMT

ಹೊಸದಿಲ್ಲಿ: ಫೋನ್ ಕರೆಗಳ ಸಂಪರ್ಕಕ್ಕೆ ಮುಂಚಿತವಾಗಿ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಧ್ವನಿಯಲ್ಲಿ ಕೇಳಿ ಬರುತ್ತಿದ್ದ ಕೊರೊನ ವೈರಸ್  ಕುರಿತ ಸಾರ್ವಜನಿಕ ಪ್ರಕಟನೆಯ ಗುರುವಾರದಿಂದ ಬದಲಾಗುತ್ತಿದೆ. ಕೋವಿಡ್-19 ಲಸಿಕೆಗಳ ಮೊದಲ ಡೋಸ್ ನೀಡುವ ಎರಡು ದಿನಗಳ ಮೊದಲು ಈ ಬೆಳವಣಿಗೆ ನಡೆದಿದೆ.

ಹೊಸ ಕಾಲರ್ ಟ್ಯೂನ್ ಮಹಿಳೆಯ ಧ್ವನಿಯನ್ನು ಹೊಂದಿದ್ದು, ಕೋವಿಡ್-19 ವ್ಯಾಕ್ಸಿನೇಶನ್ ಡ್ರೈ ವ್(ಲಸಿಕೆ ನೀಡಿಕೆ ಅಭಿಯಾನ)ಬಗ್ಗೆ ಜಾಗೃತಿಗಾಗಿ ಈ ಧ್ವನಿಯನ್ನು ಬಳಸಲಾಗುತ್ತಿದೆ.

ಕೊರೋನ ಬಾರದಂತೆ ತಡೆಯಲು ಸುರಕ್ಷತಾ ಕ್ರಮಗಳನ್ನು ಪಟ್ಟಿ ಮಾಡುವ ಕಾಲರ್ ಟ್ಯೂನ್ ಕರೆಯು ಹಲವರಿಂದ ಅಸಮಾಧಾನ ಎದುರಿಸಬೇಕಾಗಿತ್ತು. ಫೋನ್ ಕರೆ ಮಾಡಿದಾಗಲ್ಲೆಲಾ ಈ ಧ್ವನಿಯನ್ನು ಬಲವಂತವಾಗಿ ಕೇಳಬೇಕಾಗಿರುವ ಕುರಿತು ಅನೇಕರು ದೂರಿದ್ದಾರೆ.

ಹೊಸ ವರ್ಷ ಲಸಿಕೆಗಳ ರೂಪದಲ್ಲಿ ಹೊಸ  ಭರವಸೆಯ ಕಿರಣ ಮೂಡಿಸಿದೆ. ಭಾರತದಲ್ಲಿ ಅಭಿವೃದ್ದಿಪಡಿಸಿರುವ ಲಸಿಕೆಗಳು ಸುರಕ್ಷಿತ, ಪರಿಣಾಮಕಾರಿ ಹಾಗೂ ರೋಗ ನಿರೋಧಕ ಶಕ್ತಿಯನ್ನು  ನೀಡುತ್ತದೆ. ಭಾರತೀಯ ಲಸಿಕೆಗಳ ಮೇಲೆ ನಂಬಿಕೆ ಇರಬೇಕು ಹಾಗೂ ವದಂತಿಗಳನ್ನು ನಂಬಬಾರದು ಎಂದು ಸಂದೇಶದಲ್ಲಿ ಮನವಿ ಮಾಡಲಾಗುತ್ತಿದೆ.

ಪ್ರಧಾನಿ ಮೋದಿ ಅವರ ಹೊಸ ಘೋಷಣೆ 'ದವಾಯಿ ಭಿ, ಕಡೈ ಭಿ'(ಔಷಧಿ ಹಾಗೂ ಎಚ್ಚರಿಕೆ ಎರಡೂ ಅಗತ್ಯ) ಅನ್ನು ಬಳಸಿಕೊಂಡು ಲಸಿಕೆಗಳನ್ನು ನೀಡಲು ಆರಂಭವಾಗಿದ್ದರೂ ಕೋವಿಡ್-19 ಮುನ್ನಚ್ಚರಿಕೆಗಳನ್ನು ಮುಂದುವರಿಸಬೇಕು ಎಂದು ಸಂದೇಶದಲ್ಲಿ ಮನವಿ ಮಾಡಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News