ಕಾಮೆಡಿಯನ್ ಮುನಾವರ್ ಫಾರೂಕಿ ಹಿಂದೂ ದೇವರನ್ನು ಅವಮಾನಿಸಿಲ್ಲ: ಇಂದೋರ್ ಪೊಲೀಸ್ ಅಧೀಕ್ಷಕ

Update: 2021-01-14 16:37 GMT

ಮುಂಬೈ, ಜ. 14: ಸ್ಟಾಂಡ್ ಅಪ್ ಕಾಮೆಡಿಯನ್ ಮುನಾವರ್ ಫಾರೂಕಿ ಹಿಂದೂ ದೇವರುಗಳನ್ನು ಅಪಹಾಸ್ಯ ಮಾಡಿಲ್ಲ. ಸಂಘಪರಿವಾರದ ಗುಂಪಿನ ಪ್ರತಿಪಾದನೆಯ ಆಧಾರದಲ್ಲಿ ಅವರನ್ನು ಬಂಧಿಸಲಾಯಿತು ಎಂದು ಇಂದೋರ್‌ನ ಪೊಲೀಸ್ ಅಧೀಕ್ಷಕ ವಿಜಯ ಖಾತ್ರಿ ಹೇಳಿರುವುದನ್ನು ಉಲ್ಲೇಖಿಸಿ ಆರ್ಟಿಕಲ್-14’ ವೆಬ್‌ಸೈಟ್ ಗುರುವಾರ ವರದಿ ಮಾಡಿದೆ.

ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ ಆರೋಪದಲ್ಲಿ ಫಾರೂಕಿ ಅವರನ್ನು ಜನವರಿ 1ರಂದು ಮಧ್ಯಪ್ರದೇಶದ ಇಂದೋರ್ ನಗರದ ಕೆಫೆಯೊಂದರಿಂದ ಬಂಧಿಸಲಾಗಿತ್ತು. ಪೂರ್ವಾಭ್ಯಾಸ (ರಿಹರ್ಸಲ್)ದ ಸಂದರ್ಭ ಜೋಕುಗಳನ್ನು ಕೇಳಿದೆ ಎಂದು ಸಂಘ ಪರಿವಾರದ ಸಂಘಟನೆ ಹಿಂದ್ ರಕ್ಷಕ್ ಸಂಘಟನೆ ಮುಖ್ಯಸ್ಥ ಏಕಲವ್ಯ ಸಿಂಗ್ ಗೌರ್‌ ನೀಡಿದ ದೂರಿನ ಆಧಾರದಲ್ಲಿ ಫಾರೂಕಿ ಅವರನ್ನು ಬಂಧಿಸಲಾಗಿತ್ತು. ಆದಾಗ್ಯೂ, ಪುರಾವೆಗಳು, ದೃಶ್ಯ ಹಾಗೂ ಇತರ ವಿಚಾರಗಳ ಕೊರತೆಯನ್ನು ಗಣನೆಗೆ ತೆಗೆದುಕೊಂಡಿಲ್ಲ ಎಂದು ಪೊಲೀಸ್ ಅಧಿಕಾರಿ ಹೇಳಿರುವುದಾಗಿ ‘ಆರ್ಟಿಕಲ್-14’ ವೆಬ್‌ಸೈಟ್ ವರದಿ ಮಾಡಿದೆ.

ಇದು ಪ್ರಸ್ತುತ ವಿಷಯವೇ ಅಲ್ಲ ಎಂದು ಖಾತ್ರಿ ‘ಆರ್ಟಿಕಲ್-14’ ವೆಬ್‌ಸೈಟ್‌ಗೆ ತಿಳಿಸಿದ್ದಾರೆ. ಫಾರೂಕಿ ಅವರು ಪ್ರದರ್ಶನ ನೀಡುವ ಮೊದಲ ಸ್ಥಳದಲ್ಲಿ ದಾಂಧಲೆ ನಡೆಯಿತು. ಆದರೆ, ಪೂರ್ವಾಭ್ಯಾಸದ ಸಂದರ್ಭ ರಾಮ ಹಾಗೂ ಶಿವಾಜಿ (ಹಿಂದೂ ದೇವರು) ಬಗ್ಗೆ ಅವರು ಜೋಕು ಮಾಡುತ್ತಿದ್ದರು ಎಂದು ದೂರುದಾರರು ನಮಗೆ ಹೇಳಿದ್ದರು ಎಂದು ಖಾತ್ರಿ ವೆಬ್‌ಸೈಟ್‌ಗೆ ತಿಳಿಸಿದ್ದಾರೆ. ಫಾರೂಕಿ ಅವರನ್ನು ಬಂಧಿಸಿದ ಎರಡು ದಿನಗಳ ಬಳಿಕ ಜನವರಿ 4ರಂದು ಇಂದೋರ್‌ನ ಪೊಲೀಸರು ಫಾರೂಕಿ ಅವರು ಹಿಂದೂ ದೇವರಿಗೆ ಅವಮಾನ ಮಾಡಿರುವುದನ್ನು ತೋರಿಸುವ ವೀಡಿಯೊ ಪುರಾವೆ ಇಲ್ಲ ಎಂದು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News