ಅಮೆರಿಕದ ರಾಷ್ಟ್ರೀಯ ಆರ್ಥಿಕ ಮಂಡಳಿಯ ಉಪ ನಿರ್ದೇಶಕಿಯಾಗಿ ಭಾರತ ಮೂಲದ ಸಮೀರಾ ಫಾಝಿಲಿ ನೇಮಕ

Update: 2021-01-16 07:52 GMT

ವಾಶಿಂಗ್ಟನ್: ಅಮೆರಿಕದ ಚುನಾಯಿತ ಅಧ್ಯಕ್ಷ ಜೋ ಬೈಡನ್ ಅವರು ಭಾರತೀಯ-ಅಮೆರಿಕನ್ ಸಮೀರಾ ಫಾಝಿಲಿ ಅವರನ್ನು ಶ್ವೇತ ಭವನದ ರಾಷ್ಟ್ರೀಯ ಆರ್ಥಿಕ ಮಂಡಳಿಯ ಉಪ ನಿರ್ದೇಶಕಿಯಾಗಿ  ನೇಮಕ ಮಾಡಿದ್ದಾರೆ.

ಸಮೀರಾ ಅವರ ನೇಮಕವನ್ನು ಬೈಡನ್-ಕಮಲಾ ಹ್ಯಾರಿಸ್ ಅವರ ಅಧಿಕಾರ ಹಸ್ತಾಂತರ ಪ್ರಕ್ರಿಯೆಯ ತಂಡ ಶುಕ್ರವಾರ ಪ್ರಕಟಿಸಿದೆ.
ಸಮೀರಾ ಅವರು ಬೈಡನ್ ಆಡಳಿತದಲ್ಲಿ ಪ್ರಮುಖ ಹುದ್ದೆ ಅಲಂಕರಿಸಲಿರುವ ಕಾಶ್ಮೀರ ಮೂಲದ ಎರಡನೇ ಭಾರತೀಯ ಅಮೆರಿಕನ್. ಕಾಶ್ಮೀರ ಮೂಲದ ಭಾರತೀಯ-ಅಮೆರಿಕನ್ ಆಯಿಷಾ ಶಾ ಅವರನ್ನು ಇಂತಹದ್ದೇ ಪ್ರಮುಖ ಹುದ್ದೆ ಯೊಂದಕ್ಕೆ ಡಿಸೆಂಬರ್ ನಲ್ಲಿ ನೇಮಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News