“ಯಾವುದೇ ಖಾತೆಯನ್ನು ಡಿಲೀಟ್ ಮಾಡುವ ಉದ್ದೇಶವಿಲ್ಲ”: ಫೆ.8ರ ಗಡುವಿನಿಂದ ಹಿಂದೆ ಸರಿದ ವಾಟ್ಸ್ಯಾಪ್

Update: 2021-01-16 13:49 GMT

ಸ್ಯಾನ್ ಫ್ರಾನ್ಸಿಸ್ಕೋ,ಜ.16: ಫೇಸ್ ಬುಕ್ ಒಡೆತನದ ವಾಟ್ಸ್ಯಾಪ್ ತಾನು ಜಾರಿಗೊಳಿಸುವುದಾಗಿ ಹೇಳಿದ್ದ ತನ್ನ ನೂತನ ಪ್ರೈವೆಸಿ ಅಪ್‍ಡೇಟ್ ಕುರಿತು ಜನರಲ್ಲಿ ಮೂಡಿರುವ ಗೊಂದಲದಿಂದಾಗಿ ಅದರ ಜಾರಿಯನ್ನು ಮುಂದೂಡಿದೆ. ವಾಟ್ಸ್ಯಾಪ್ ತನ್ನ ಪ್ರೈವೆಸಿ ಪಾಲಿಸಿ ಅಪ್‍ಡೇಟ್ ಘೋಷಿಸಿದ ನಂತರ ಹಲವರು ಅದನ್ನು ತೊರೆದು ಟೆಲಿಗ್ರಾಂ ಹಾಗೂ ಸಿಗ್ನಲ್ ಮೆಸೇಜಿಂಗ್ ಆ್ಯಪ್‍ನತ್ತ ವಾಲಿರುವುದು ವಾಟ್ಸ್ಯಾಪ್ ಆತಂಕಕ್ಕೆ ಕಾರಣವಾಗಿದೆ.

ಬಳಕೆದಾರರು ಫೆಬ್ರವರಿ 8ರೊಳಗಾಗಿ  ಹೊಸ ಪ್ರೈವೆಸಿ ಅಪ್‍ಡೇಟ್ ಒಪ್ಪಿಕೊಳ್ಳಬೇಕು ಇಲ್ಲದೇ ಇದ್ದಲ್ಲಿ ವಾಟ್ಸ್ಯಾಪ್ ಡಿಲೀಟ್ ಆಗುವುದೆಂದು ಈ ಹಿಂದೆ ಹೇಳಿದ್ದ ಸಂಸ್ಥೆ ಇದೀಗ ತನ್ನ ಗಡುವಿನಿಂದ ಹಿಂದೆ ಸರಿದಿದೆ.

"ನಮ್ಮ ಇತ್ತೀಚಿಗಿನ ಅಪ್‍ಡೇಟ್ ಕುರಿತಂತೆ ಜನರಲ್ಲಿ ಬಹಳಷ್ಟು ಗೊಂದಲವಿದೆಯೆಂದು ತಿಳಿದು ಬಂದಿದೆ, ಆದುದರಿಂದ ಹೊಸ ಪ್ರೈವೆಸಿ ಪಾಲಿಸಿ ಪರಿಶೀಲಿಸಲು ಬಳಕೆದಾರರಿಗೆ ಸಮಯ ಇರುವಂತೆ ಮಾಡುತ್ತಿದ್ದೇವೆ ಆದರೆ ನಾವು ಯಾವುದೇ ಖಾತೆ ಡಿಲೀಟ್ ಮಾಡುವ ಉದ್ದೇಶ ಹೊಂದಿರಲಿಲ್ಲ ಹಾಗೂ ಮುಂದೆಯೂ ಇಂತಹ ಉದ್ದೇಶ ಹೊಂದುವುದಿಲ್ಲ" ಎಂದು ವಾಟ್ಸ್ಯಾಪ್ ತನ್ನ ಬ್ಲಾಗ್ ಪೋಸ್ಟ್ ನಲ್ಲಿ ಹೇಳಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News