ಕೋವಿಡ್ ಲಸಿಕೆ ಸ್ವೀಕರಿಸಿದ ಭಾರತದ ಮೊದಲ ರಾಜಕಾರಣಿ ಮಹೇಶ್ ಶರ್ಮಾ

Update: 2021-01-16 14:34 GMT

ಹೊಸದಿಲ್ಲಿ: ಬಿಜೆಪಿ ನಾಯಕ ಮಹೇಶ್ ಶರ್ಮಾ ಹಾಗೂ ತೃಣಮೂಲ ಕಾಂಗ್ರೆಸ್ ಶಾಸಕ ರವೀಂದ್ರ ನಾಥ್ ಚಟರ್ಜಿ ಕೋವಿಡ್-19 ಲಸಿಕೆ ಪಡೆದ ಭಾರತದ ಮೊದಲ ರಾಜಕಾರಣಿಗಳಾಗಿದ್ದಾರೆ.

 ಉತ್ತರಪ್ರದೇಶದ ಗೌತಮ ಬುದ್ದ ನಗರದ ಸಂಸದ ಶರ್ಮಾ ಅವರಿಗೆ ಓರ್ವ ಆರೋಗ್ಯ ಕಾರ್ಯಕರ್ತರೆಂಬ ನೆಲೆಯಲ್ಲಿ ಶನಿವಾರ ಕೊರೋನ ವೈರಸ್ ಲಸಿಕೆ  ನೀಡಲಾಯಿತು.

ತರಬೇತಿ ಪಡೆದ ವೈದ್ಯರೂ ಆಗಿರುವ ಡಾ.ಶರ್ಮಾ ಅವರು ಬೆಳಗ್ಗೆ 11 ಗಂಟೆಗೆ ನೋಯ್ಡಾ ಸೆಕ್ಟರ್ 27ರ ಆಸ್ಪತ್ರೆಯಲ್ಲಿ ಲಸಿಕೆ ಪಡೆದರು ಎಂದು ವಕ್ತಾರರು ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದರು.

61ರ ವರ್ಷದ ಮಾಜಿ ಕೇಂದ್ರ ಸಚಿವರನ್ನು ಆಸ್ಪತ್ರೆಯಲ್ಲಿ 30 ನಿಮಿಷಗಳ ಕಾಲ ವೀಕ್ಷಣೆಗೆ ಒಳಪಡಿಸಲಾಯಿತು.

ಇದೇ ಸಂದರ್ಭದಲ್ಲಿ ಪಶ್ಚಿಮಬಂಗಾಳದ ಕಟ್ವಾದ ಪುರ್ಬಾ ಬರ್ಧಮನ್ ಜಿಲ್ಲೆಯ ತೃಣಮೂಲ ಕಾಂಗ್ರೆಸ್ ಶಾಸಕ ರವೀಂದ್ರ ನಾಥ್ ಚಟರ್ಜಿ ಅವರಿಗೂ ರೋಗಿಗಳ ಕಲ್ಯಾಣ ಸಮಿತಿಯಲ್ಲಿರುವ ಕಾರಣಕ್ಕೆ ಲಸಿಕೆ ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News