ನಡ್ಡಾ ಯಾರು ?, ಅವರಿಗೆ ನಾನೇಕೆ ಉತ್ತರಿಸಬೇಕು?: ರಾಹುಲ್ ಗಾಂಧಿ ಪ್ರಶ್ನೆ

Update: 2021-01-19 16:36 GMT

ಹೊಸದಿಲ್ಲಿ, ಜ. 19: ಸರಣಿ ಪ್ರಶ್ನೆಗಳ ಮೂಲಕ ತನ್ನನ್ನು ಅಣಕಿಸಿದ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರಿಗೆ ತಿರುಗೇಟು ನೀಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ‘‘ನಡ್ಡಾ ಯಾರು ? ನಾನು ಅವರ ಪ್ರಶ್ನೆಗೆ ಯಾಕೆ ಉತ್ತರಿಸಬೇಕು ?’’ ಎಂದು ಪ್ರಶ್ನಿಸಿದ್ದಾರೆ.

ವಾಸ್ತವ ಗಡಿಯ ಭಾರತೀಯ ಭಾಗದಲ್ಲಿರುವ ಅರುಣಾಚಲ ಪ್ರದೇಶದಲ್ಲಿ ಚೀನಾ ಗ್ರಾಮ ನಿರ್ಮಿಸಿದ ವರದಿಯ ಕುರಿತಂತೆ ರಾಹುಲ್ ಗಾಂಧಿ ಕೇಂದ್ರ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ ಬಳಿಕ ರಾಹುಲ್ ಗಾಂಧಿ ಅವರನ್ನು ಗುರಿಯಾಗಿರಿಸಿ ಜೆ.ಪಿ. ನಡ್ಡಾ ಥ್ರೆಡ್ ಪೋಸ್ಟ್ ಮಾಡಿದ್ದರು.

‘‘ಈಗ ರಾಹುಲ್ ಗಾಂಧಿ ಅವರು ತಿಂಗಳ ರಜೆ ತೆಗೆದುಕೊಂಡು ಹಿಂದಿರುಗಿದ್ದಾರೆ. ನಾನು ಅವರಲ್ಲಿ ಕೆಲವು ಪ್ರಶ್ನೆಗಳನ್ನು ಕೇಳಲು ಬಯಸುತ್ತೇನೆ. ಇಂದಿನ ಪತ್ರಿಕಾಗೋಷ್ಠಿಯಲ್ಲಿ ಅವರು ಈ ಪ್ರಶ್ನೆಗೆ ಉತ್ತರ ನೀಡುತ್ತಾರೆ ಎಂದು ಭಾವಿಸುತ್ತೇನೆ’’ ಎಂದು ಜೆ.ಪಿ. ನಡ್ಡಾ ಈ ಪ್ರಶ್ನೆಗಳನ್ನು ಬರೆದಿದ್ದರು ಪತ್ರಕರ್ತರೊಂದಿಗೆ ಮಾತನಾಡಿದ ರಾಹುಲ್ ಗಾಂಧಿ, ‘‘ನಾನು ಉತ್ತರಿಸಲು ಅವರು ಯಾರು ? ಅವರು ನನ್ನ ಪ್ರಾದ್ಯಾಪಕರೆ ? ನಾನು ದೇಶಕ್ಕೆ ಉತ್ತರಿಸುತ್ತೇನೆ’’ ಎಂದು ಹೇಳಿದರು. ಚೀನಾ ವಿಷಯದಿಂದ ಹಿಡಿದು ಕೊರೋನ ವೈರಸ್ ಹಾಗೂ ರೈತರ ಪ್ರತಿಭಟನೆ ವರೆಗೆ ವಿವಿಧ ವಿಷಯಗಳ ಬಗ್ಗೆ ಜೆ.ಪಿ. ನಡ್ಡಾ ಅವರು ರಾಹುಲ್ ಗಾಂಧಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News