ಜ. 27ರಂದು ಬಿಡುಗಡೆಗೊಳ್ಳಲಿರು ಶಶಿಕಲಾ: ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದ ಪಳನಿಸ್ವಾಮಿ

Update: 2021-01-20 17:45 GMT

ಚೆನ್ನೈ, ಜ.20: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಜೆ ಜಯಲಲಿತಾರ ನಿಕಟ ಸ್ನೇಹಿತೆ ವಿಕೆ ಶಶಿಕಲಾ ಜನವರಿ 27ರಂದು ಬಂಧನದಿಂದ ಬಿಡುಗಡೆಗೊಳ್ಳುವುದ ಖಚಿತವಾಗಿದೆ ಎಂದು ಅವರ ವಕೀಲರು ಹೇಳಿದ್ದಾರೆ.

ಆದಾಯ ಮೀರಿ ಆಸ್ತಿ ಹೊಂದಿರುವ ಪ್ರಕರಣದಲ್ಲಿ 2017ರ ಫೆಬ್ರವರಿ 14ರಂದು ಶಶಿಕಲಾಗೆ ಶಿಕ್ಷೆ ಘೋಷಿಸಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಬಂಧನದಲ್ಲಿಡಲಾಗಿತ್ತು. ಶಶಿಕಲಾ 2021 ಜನವರಿ 27ರ ಬೆಳಿಗ್ಗೆ ಬಿಡುಗಡೆಗೊಳ್ಳಲು ಅರ್ಹರಾಗಿದ್ದಾರೆ ಎಂದು ಜೈಲಿನ ಅಧೀಕ್ಷಕರು ಇ-ಮೇಲ್ ಸಂದೇಶ ರವಾನಿಸಿರುವುದಾಗಿ ವಕೀಲ ಎನ್ ರಾಜ ಸೆಂಥೂರ್ ಪಾಂಡಿಯನ್ ಮಂಗಳವಾರ ಹೇಳಿದ್ದಾರೆ.

ತಮಿಳುನಾಡು ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿರುವಂತೆಯೇ ಶಶಿಕಲಾ ಜೈಲಿನಿಂದ ಬಿಡುಗಡೆಗೊಂಡಿರುವುದು ಎಐಎಡಿಎಂಕೆಗೆ ಅನುಕೂಲವಾಗಲಿದೆ . ತಮಿಳುನಾಡು ರಾಜಕೀಯದಲ್ಲಿ ಈಗಲೂ ಶಶಿಕಲಾ ಪ್ರಭಾವ ಉಳಿಸಿಕೊಂಡಿದ್ದಾರೆ ಎಂದು ವಿಶ್ಲೇಷಿಸಲಾಗಿದೆ.

ಆದರೆ ಎಐಎಡಿಎಂಕೆಗೆ ಶಶಿಕಲಾ ಮತ್ತೆ ಸೇರ್ಪಡೆಗೊಳ್ಳುವ ಸಾಧ್ಯತೆಯನ್ನು ತಮಿಳುನಾಡು ಮುಖ್ಯಮಂತ್ರಿ ಇಕೆ ಪಳನಿಸ್ವಾಮಿ ತಳ್ಳಿಹಾಕಿದ್ದಾರೆ. ಅವರು ಈಗ ಪಕ್ಷದಲ್ಲಿ ಇಲ್ಲ. ಅವರನ್ನು ಸೇರಿಸಿಕೊಳ್ಳುವುದಿಲ್ಲ ಎಂದು ನಿರ್ಧರಿಸಿದ್ದೇವೆ. ಈ ವಿಷಯದಲ್ಲಿ ವಿಭಿನ್ನ ಅಭಿಪ್ರಾಯಗಳಿಲ್ಲ ಎಂದವರು ಹೇಳಿದ್ದಾರೆ. ಈ ಮಧ್ಯೆ, ಶಶಿಕಲಾರನ್ನು ಎಐಐಎಡಿಎಂಕೆಗೆ ಸೇರ್ಪಡೆಗೊಳಿಸಿ ಮತ ವಿಭಜನೆಯಾಗುವುದನ್ನು ತಪ್ಪಿಸಬೇಕೆಂದು ಬಿಜೆಪಿ ಒತ್ತಡ ಹೇರುತ್ತಿದೆ. ಶಶಿಕಲಾ ಎಐಐಡಿಎಂಕೆಯಿಂದ ದೂರವುಳಿದರೆ ಅದರ ಲಾಭ ಡಿಎಂಕೆಗೆ ದೊರಕಬಹುದು ಎಂಬುದು ಬಿಜೆಪಿಯ ಲೆಕ್ಕಾಚಾರವಾಗಿದೆ.

ಜಯಲಲಿತಾ ನಿಧನದ ಬಳಿಕ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಪಳನಿಸ್ವಾಮಿ ಆಗ ಶಶಿಕಲಾರ ಕಾಲಿಗೆರಗಿದ್ದರು. ಆದರೆ ಶಶಿಕಲಾಗೆ ಜೈಲುಶಿಕ್ಷೆಯಾದ ಬಳಿಕ ತಮಿಳುನಾಡಿನ ರಾಜಕೀಯ ಪರಿಸ್ಥಿತಿ ಬದಲಾಗಿದ್ದು 2017ರಲ್ಲಿ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News