​ಕನ್ನಡ ನಟಿ ರಾಗಿಣಿ ದ್ವಿವೇದಿಗೆ ಸುಪ್ರೀಂಕೋರ್ಟ್ ಜಾಮೀನು

Update: 2021-01-21 06:45 GMT

ಹೊಸದಿಲ್ಲಿ: ಡ್ರಗ್ಸ್ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ಕನ್ನಡ ನಟಿ ರಾಗಿಣಿ ದ್ವಿವೇದಿಗೆ ಸುಪ್ರೀಂಕೋರ್ಟ್ ಗುರುವಾರ  ಜಾಮೀನು ಮಂಜೂರು ಮಾಡಿದೆ.

ನಟಿ ರಾಗಿಣಿ ಅಂತರ್ ರಾಷ್ಟ್ರೀಯ ಡ್ರಗ್ಸ್ ಜಾಲದೊಂದಿಗೆ ಸಂಪರ್ಕ ಹೊಂದಿದ್ದ ಆರೋಪದಲ್ಲಿ ಸೆಪ್ಟಂಬರ್ ನಲ್ಲಿ ಬಂಧಿಸಲ್ಪಟ್ಟು ಜೈಲು ಸೇರಿದ್ದರು. 

ರಾಗಿಣಿ ತನಗೆ ಜಾಮೀನು ನಿರಾಕರಿಸಿದ್ದ ಕರ್ನಾಟಕ  ಹೈಕೋರ್ಟ್ ತೀರ್ಪು ಪ್ರಶ್ನಿಸಿ  ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. 30ರ ಹರೆಯದ ರಾಗಿಣಿಯವರನ್ನು ಬೆಂಗಳೂರಿನ ಕ್ರೈಮ್ ಬ್ರ್ಯಾಂಚ್ ಬಂಧಿಸಿತ್ತು. 

ರೇವ್ ಪಾರ್ಟಿಗಳಲ್ಲಿ ಹಾಗೂ ಇತರ ಕಾರ್ಯಕ್ರಮಗಳಲ್ಲಿ ಸೈಕೆಡೆಲಿಕ್ ಡ್ರಗ್ಸ್ ಗಳನ್ನು ಪೂರೈಸುತ್ತಿದ್ದ ಜಾಲದೊಂದಿಗೆ ಸಂಪರ್ಕ ಹೊಂದಿದ್ದಾರೆಂಬ ಆರೋಪ ಹೊರಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News