×
Ad

ನ್ಯಾಯಾಲಯಗಳು ಸಿದ್ದೀಖ್ ಕಪ್ಪನ್, ಮುನವ್ವರ್ ಫಾರೂಖಿಗೆ ಜಾಮೀನು ಏಕೆ ನಿರಾಕರಿಸುತ್ತಿವೆ: ಚಿದಂಬರಂ ಪ್ರಶ್ನೆ

Update: 2021-01-21 16:16 IST

ಹೊಸದಿಲ್ಲಿ : "ನ್ಯಾಯಾಲಯಗಳು ಪತ್ರಕರ್ತ ಸಿದ್ದೀಖ್ ಕಪ್ಪನ್ ಹಾಗೂ ಕಾಮಿಡಿಯನ್ ಮುನವ್ವರ್ ಫಾರೂಖಿಗೆ ಜಾಮೀನು ಏಕೆ ನಿರಾಕರಿಸುತ್ತಿವೆ,?'' ಎಂದು  ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಮಾಜಿ ವಿತ್ತ ಸಚಿವ ಪಿ ಚಿದಂಬರಂ ಪ್ರಶ್ನಿಸಿದ್ದಾರೆ. ಈ ಕುರಿತು ಅವರು ಇಂದು ಸರಣಿ ಟ್ವೀಟ್ ಮಾಡಿದ್ದಾರೆ.

"ಸಮಾನತೆಯೆಂದರೆ ಎಲ್ಲರಿಗೂ ನ್ಯಾಯ ದೊರೆಯುವಂತಾಗಲು ಸಮಾನ ಅವಕಾಶವಿದೆ ಹಾಗೂ ಕಾನೂನಿನ ತತ್ವಗಳ ಜಾರಿಯೂ ಸಮಾನ ರೀತಿಯಲ್ಲಿ ಆಗಬೇಕಿದೆ,'' ಎಂದು  ಚಿದಂಬರಂ ಹೇಳಿದ್ದಾರೆ.

ಜಸ್ಟಿಸ್ ರವೀಂದ್ರ ಭಟ್ ಅವರ ನೇತೃತ್ವದ ಸಾಂವಿಧಾನಿಕ ಪೀಠ ಹಾಗೂ ಜಸ್ಟಿಸ್ ಡಿ ವೈ ಚಂದ್ರಚೂಡ್ ಅವರ ನೇತೃತ್ವದ ಇನ್ನೊಂದು ಪೀಠದ  ಆದೇಶಗಳ ಹೊರತಾಗಿಯೂ 'ಬೇಲ್ ಈಸ್ ದಿ ರೂಲ್ ಎಂಡ್ ಜೈಲ್ ಈಸ್ ದಿ ಎಕ್ಸೆಪ್ಶನ್' ಎಂಬ ತತ್ವವನ್ನು ಪ್ರತಿಯೊಂದು ಪ್ರಕರಣದಲ್ಲೂ ಏಕೆ ಅನ್ವಯಿಸಲಾಗುತ್ತಿಲ್ಲ?' ಎಂದೂ ಚಿದಂಬರಂ ಪ್ರಶ್ನಿಸಿದ್ದಾರೆ.

ಹತ್ರಸ್ ಪ್ರಕರಣದ ಸಂತ್ರಸ್ತೆಯ ಕುಟುಂಬವನ್ನು ಭೇಟಿಯಾಗಲು ತೆರಳುತ್ತಿದ್ದ ವೇಳೆ ಕೇರಳದ ಪತ್ರಕರ್ತ ಕಪ್ಪನ್ ಅವರ ಬಂಧನವಾಗಿದ್ದರೆ ಇಂದೋರ್‍ನಲ್ಲಿ ಹೊಸ ವರ್ಷದ ಕಾರ್ಯಕ್ರಮದಲ್ಲಿ ಕಾಮಿಡಿಯನ್ ಮುನಾವರ್ ಹಿಂದು ದೇವರುಗಳನ್ನು ಅವಮಾನಿಸಿದ್ದಾರೆಂಬ ಆರೋಪ ಎದುರಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News