ಸುಪ್ರೀಂ ಮಾಜಿ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯಿಗೆ ಝಡ್ ಪ್ಲಸ್ ವಿಐಪಿ ಭದ್ರತೆ

Update: 2021-01-22 15:21 GMT

ಹೊಸದಿಲ್ಲಿ, ಜ. 22: ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯಿ ಅವರಿಗೆ ಕೇಂದ್ರ ಸರಕಾರ ಅತ್ಯುಚ್ಚ ಝಡ್ ಪ್ಲಸ್ ವಿಐಪಿ ಭದ್ರತೆ ನೀಡಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ. ದೇಶಾದ್ಯಂತ ಪ್ರಯಾಣಿಸುವ ಸಂದರ್ಭ 66ರ ಹರೆಯದ ರಂಜನ್ ಗೊಗೋಯಿ ಅವರಿಗೆ ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್)ಯ ಸಶಸ್ತ್ರ ಕಮಾಂಡೊಗಳು ರಕ್ಷಣೆ ನೀಡಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಪ್ರಸ್ತುತ ರಂಜನ್ ಗೊಗೋಯಿ ಅವರು ರಾಜ್ಯ ಸಭೆ ಸದಸ್ಯ. ಈ ಹಿಂದೆ ಗೊಗೋಯಿ ಅವರಿಗೆ ದಿಲ್ಲಿ ಪೊಲೀಸರ ಭದ್ರತೆ ನೀಡಲಾಗಿತ್ತು. 2019 ನವೆಂಬರ್‌ನಲ್ಲಿ ರಂಜನ್ ಗೊಗೋಯಿ ಅವರು ಮುಖ್ಯ ನ್ಯಾಯಮೂರ್ತಿ ಹುದ್ದೆಯಿಂದ ನಿವೃತ್ತರಾಗಿದ್ದರು. ಅನಂತರ ಅವರನ್ನು ಕೇಂದ್ರ ಸರಕಾರ ಸಂಸತ್ತಿನ ಮೇಲ್ಮನೆಗೆ ನಾಮ ನಿರ್ದೇಶನ ಮಾಡಿತ್ತು. ಸಿಆರ್‌ಪಿಎಫ್‌ನಲ್ಲಿ ವಿಐಪಿ ಭದ್ರತಾ ಘಟಕ ಇದೆ. ಈ ಘಟಕ ಭದ್ರತೆ ನೀಡುತ್ತಿರುವ 63ನೇ ವ್ಯಕ್ತಿ ಗೊಗೋಯಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News