×
Ad

ಜ.26ರಂದು ಟ್ರ್ಯಾಕ್ಟರ್ ರ‍್ಯಾಲಿ ನಡೆಸಿಯೇ ಸಿದ್ಧ: ರೈತ ನಾಯಕರ ಘೋಷಣೆ

Update: 2021-01-22 21:40 IST

ಹೊಸದಿಲ್ಲಿ,ಜ.22: ನೂತನ ಕೃಷಿ ಕಾಯ್ದೆಗಳ ವಿರುದ್ಧ ಕೇಂದ್ರ ಸರಕಾರದ ಜೊತೆ ತಾವು ನಡೆಸುತ್ತಿರುವ 11ನೇ ಸುತ್ತಿನ ಮಾತುಕತೆಯೂ ವಿಫಲಗೊಂಡಿರುವುದರಿಂದ ಜನವರಿ 26ರಂದು ತಮ್ಮ ಪ್ರಸ್ತಾವಿತ ಟ್ರ್ಯಾಕ್ಟರ್ ರ‍್ಯಾಲಿಯು ನಿಗದಿಯಂತೆ ನಡೆಯಲಿದೆಯೆಂದು ಪ್ರತಿಭಟನಾ ನಿರತ ರೈತರು ಶುಕ್ರವಾರ ಘೋಷಿಸಿದ್ದಾರೆ

ಮಾತುಕತೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೈತ ನಾಯಕ ಬಲಬೀರ್ ಸಿಂಗ್ ಅವು, ಟ್ರ್ಯಾಕ್ಟರ್   ರ‍್ಯಾಲಿಯು ಶಾಂತಿಯುತವಾಗಿ ನಡೆಯುವಂತೆ ನೋಡಿಕೊಳ್ಳಬೇಕೆಂದು ಕೇಂದ್ರ ಸರಕಾರವನ್ನು ಆಗ್ರಹಿಸಿದರು.

 ‘‘ನಾವು ಮೊದಲೇ ನಿರ್ಧರಿಸಿದಂತೆ ಟ್ರ್ಯಾಕ್ಟರ್ ರ‍್ಯಾಲಿಯು ಹೊಸದಿಲ್ಲಿಯ ಹೊರವರ್ತುಲ ರಸ್ತೆಯಲ್ಲಿ ನಡೆಯಲಿದೆ. ರ್ಯಾಲಿಯು ಶಾಂತಿಯುತವಾಗಿ ನಡೆಯುವಂತೆ ಸರಕಾರವು ಖಾತರಿಪಡಿಸಬೇಕೆಂದು ತಾವು ದಿಲ್ಲಿ ಪೊಲೀಸರಿಗೆ ಮಾಹಿತಿ ನೀಡಿರುವುದಾಗಿ ರಾಜ್ವಾಲ್ ತಿಳಿಸಿದರು.

ಕೃಷಿ ಕಾಯ್ದೆಗಳ ರದ್ದತಿಗೆ ಆಗ್ರಹಿಸಿ ಸಾವಿರಾರು ರೈತರು ನವೆಂಬರ್ 28ರಿಂದ ದಿಲ್ಲಿಯ ಗಡಿಗಳಲ್ಲಿ ಧರಣಿ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News