2021 ಬಜೆಟ್: ಹಣಕಾಸು ಸಚಿವರಿಂದ ‘ಯೂನಿಯನ್ ಬಜೆಟ್ ಮೊಬೈಲ್ ಆ್ಯಪ್’ ಲೋಕಾರ್ಪಣೆ

Update: 2021-01-23 18:24 GMT

ಹೊಸದಿಲ್ಲಿ, ಜ. 23: ಸಂಸತ್ ಸದಸ್ಯರು ಹಾಗೂ ಸಾರ್ವಜನಿಕರಿಗೆ ಬಜೆಟ್ ದಾಖಲೆಗಳು ಮುಕ್ತವಾಗಿ ದೊರಕಲು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ‘ಯೂನಿಯನ್ ಬಜೆಟ್ ಮೊಬೈಲ್ ಆ್ಯಪ್’ ಅನ್ನು ಶನಿವಾರ ಲೋಕಾರ್ಪಣೆಗೊಳಿಸಿದರು.

ಸಾಂಪ್ರದಾಯಿಕ ಹಲ್ವಾ ಕಾರ್ಯಕ್ರಮದಲ್ಲಿ ಈ ಆ್ಯಪ್ ಅನ್ನು ಸೀತಾರಾಮನ್ ಬಿಡುಗಡೆ ಮಾಡಿದರು. ಈ ಆ್ಯಪ್‌ನಲ್ಲಿ ವಾರ್ಷಿಕ ವಿತ್ತೀಯ ಲೆಕ್ಕಾಚಾರ, ಡಿಜಿ, ಹಣಕಾಸುವ ಬಿಲ್ ಮೊದಲಾದವುಗಳು ಸೇರಿದಂತೆ 14 ಕೇಂದ್ರ ಬಜೆಟ್‌ನ ದಾಖಲೆಗಳು ಸಂಪೂರ್ಣವಾಗಿ ಲಭ್ಯವಾಗಲಿದೆ. ಡೌನ್‌ಲೋಡ್, ಮುದ್ರಣ, ಶೋಧನೆ, ಝೂಮ್ ಮೊದಲಾದ ಅಂಶಗಳನ್ನು ಒಳಗೊಂಡಿರುವ ಈ ಆ್ಯಪ್ ಬಳಕೆದಾರರ ಸ್ನೇಹಿಯಾಗಿದೆ. ಈ ಆ್ಯಪ್‌ನಲ್ಲಿ ಮಾಹಿತಿ ದ್ವಿಭಾಷೆ (ಇಂಗ್ಲಿಷ್ ಹಾಗೂ ಹಿಂದಿ)ಯಲ್ಲಿ ಲಭ್ಯವಿದೆ. ಅಲ್ಲದೆ, ಆ್ಯಂಡ್ರಾಯ್ಡ್ ಹಾಗೂ ಐಒಎಸ್ ವೇದಿಕೆಗಳಲ್ಲಿ ಇದು ಕಾರ್ಯನಿರ್ವಹಿಸಲಿದೆ ಎಂದು ಹಣಕಾಸು ಸಚಿವಾಲಯದ ಅಧಿಕೃತ ಹೇಳಿಕೆ ತಿಳಿಸಿದೆ.

2021 ಫೆಬ್ರವರಿ 1ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಬಜೆಟ್ ಭಾಷಣ ಪೂರ್ಣಗೊಂಡ ಬಳಿಕ ಬಜೆಟ್‌ನ ದಾಖಲೆಗಳು ಈ ಮೊಬೈಲ್ ಆ್ಯಪ್‌ನಲ್ಲಿ ಲಭ್ಯವಾಗಲಿದೆ ಎಂದು ಅದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News