ರೈತರ ಟ್ರ್ಯಾಕ್ಟರ್‌ ರ‍್ಯಾಲಿ ತಡೆಯಲು ಪಾಕಿಸ್ತಾನದಿಂದ 300 ಟ್ವಿಟರ್‌ ಹ್ಯಾಂಡಲ್‌ ರಚನೆ: ದಿಲ್ಲಿ ಪೊಲೀಸ್‌ ಹೇಳಿಕೆ

Update: 2021-01-24 17:36 GMT

ಹೊಸದಿಲ್ಲಿ,ಜ.24: ಕೇಂದ್ರ ಸರಕಾರದ ಹೊಸ ಕೃಷಿ ಕಾನೂನುಗಳನ್ನು ವಿರೋಧಿಸಿ ರೈತರು ಗಣರಾಜ್ಯೋತ್ಸವದಂದು ನಡೆಸಲು ಉದ್ದೇಶಿಸಿರುವ ಟ್ರ್ಯಾಕ್ಟರ್ ರ‍್ಯಾಲಿಯನ್ನು ಅಡ್ಡಿಪಡಿಸಲು ಹಾಗೂ ಹೈಜಾಕ್ ಮಾಡಲು ಪಾಕಿಸ್ತಾನ ರಚಿಸಿರುವ 300ಕ್ಕೂ ಅಧಿಕ ಟ್ವಿಟರ್ ಹ್ಯಾಂಡಲ್ ಗಳನ್ನು ಪತ್ತೆ ಮಾಡಲಾಗಿದೆ ಎಂದು ದಿಲ್ಲಿ  ಪೊಲೀಸರು ರವಿವಾರ ಹೇಳಿಕೆ ನೀಡಿದ್ದಾರೆ.

ಟ್ರ್ಯಾಕ್ಟರ್ ಪೆರೇಡ್ ಗಾಗಿ ಮಾಡಿರುವ ಯೋಜನೆಯನ್ನು ವಿವರಿಸಿದ ವಿಶೇಷ ಪೊಲೀಸ್ ಆಯುಕ್ತ(ಗುಪ್ತಚರ)ದೀಪೇಂದ್ರ ಪಾಠಕ್, ಮಂಗಳವಾರ ಗಣರಾಜ್ಯೋತ್ಸವ ಕಾರ್ಯಕ್ರಮಗಳು ಮುಕ್ತಾಯಗೊಂಡ ಬಳಿಕ ಬಿಗಿ ಭದ್ರತೆಯ ನಡುವೆ ರ‍್ಯಾಲಿಯನ್ನು ನಡೆಸಲಾಗುವುದು ಎಂದು ಹೇಳಿದರು.

ಜನರ ದಾರಿ ತಪ್ಪಿಸಲು, ರೈತರ ಟ್ರ್ಯಾಕ್ಟರ್ ರ‍್ಯಾಲಿ ಅಡ್ಡಿಪಡಿಸಲು ಜನವರಿ 13ರಿಂದ 18ರವರೆಗೆ ಪಾಕಿಸ್ತಾನದಿಂದ 300ಕ್ಕೂ ಅಧಿಕ  ಟ್ವಿಟರ್ ಹ್ಯಾಂಡಲ್ ಗಳನ್ನು ರಚಿಸಲಾಗಿದೆ. ವಿವಿಧ ಏಜೆನ್ಸಿ ಗಳಿಂದಲೂ ಇದರ ಬಗ್ಗೆ ಮಾಹಿತಿ ಲಭಿಸಿದೆ. ಇದು ನಮಗೆ ಸವಾಲಿನ ಕೆಲಸವಾಗಿದೆ.  ರ‍್ಯಾಲಿಯನ್ನು ಗಣರಾಜ್ಯೋತ್ಸವ ಮೆರವಣಿಗೆ ಮುಗಿದ ಬಳಿಕ ಬಿಗಿ ಭದ್ರತೆಯ ಮಧ್ಯೆ ನಡೆಸಲಾಗುವುದು ಎಂದು ಪಾಠಕ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News