ಮತಾಂತರ ನಿಷೇಧ ಕಾನೂನು ಪ್ರಕರಣಗಳನ್ನು ಸುಪ್ರೀಂ ಕೋರ್ಟ್ ಗೆ ವರ್ಗಾಯಿಸುವಂತೆ ಉತ್ತರ ಪ್ರದೇಶದ ಮನವಿ ತಿರಸ್ಕಾರ

Update: 2021-01-25 15:36 GMT

ಹೊಸದಿಲ್ಲಿ,ಜ.25: ಅಲಹಾಬಾದ್ ಉಚ್ಚ ನ್ಯಾಯಾಲಯದಲ್ಲಿ ಬಾಕಿಯಿರುವ ಮತಾಂತರ ನಿಷೇಧ ಸುಗ್ರೀವಾಜ್ಞೆಗೆ ಸಂಬಂಧಿಸಿದ ಎಲ್ಲ ಪ್ರಕರಣಗಳನ್ನು ಸರ್ವೋಚ್ಚ ನ್ಯಾಯಾಲಯವು ತನಗೆ ವರ್ಗಾಯಿಸಿಕೊಳ್ಳಬೇಕು ಎಂದು ಕೋರಿ ಉತ್ತರ ಪ್ರದೇಶ ಸರಕಾರವು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೆ ಅಂಗೀಕರಿಸಲು ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೋಬ್ಡೆ ನೇತೃತ್ವದ ಪೀಠವು ಸೋಮವಾರ ನಿರಾಕರಿಸಿತು.

‘ಈ ವಿಷಯದಲ್ಲಿ ಹಿಂದೆ ನೋಟಿಸ್ ಹೊರಡಿಸಿದಾಗ ಉಚ್ಚ ನ್ಯಾಯಾಲಯದಲ್ಲಿ ಪ್ರಕರಣಗಳು ಬಾಕಿಯಿರುವುದು ತನಗೆ ತಿಳಿದಿತ್ತು. ಫೆ.2ರಂದು ವಿಚಾರಣೆಯನ್ನೂ ಅದು ನಿಗದಿಗೊಳಿಸಿದೆ. ಅದು ಪ್ರಕರಣಗಳನ್ನು ಇತ್ಯರ್ಥಗೊಳಿಸುವಾಗ ನಾವೇಕೆ ಮಧ್ಯೆ ಪ್ರವೇಶಿಸಬೇಕು’ ಎಂದು ಪೀಠವು ಉ.ಪ್ರ.ಪರ ಹಿರಿಯ ವಕೀಲ ಪಿ.ಎಸ್.ನರಸಿಂಹ ಅವರನ್ನು ಪ್ರಶ್ನಿಸಿತು.

 ಸರ್ವೋಚ್ಚ ನ್ಯಾಯಾಲಯವು ಈ ವಿಷಯದಲ್ಲಿ ಈಗಾಗಲೇ ನೋಟಿಸನ್ನು ಹೊರಡಿಸಿದೆ ಎಂದು ನರಸಿಂಹ ವಾದಿಸಿದಾಗ,‘ನಾವು ನೋಟಿಸ್ ಹೊರಡಿಸಿದ್ದೇವೆ ನಿಜ,ಆದರೆ ಉಚ್ಚ ನ್ಯಾಯಾಲಯವು ಪ್ರಕರಣಗಳನ್ನು ಇತ್ಯರ್ಥಗೊಳಿಸುವಂತಿಲ್ಲ ಎಂದು ಅದರ ಅರ್ಥವಲ್ಲ. ಇತ್ತೀಚಿನ ದಿನಗಳಲ್ಲಿ ಜನರು ಉಚ್ಚ ನ್ಯಾಯಾಲಯಗಳನ್ನು ಲಘುವಾಗಿ ಪರಿಗಣಿಸುತ್ತಿದ್ದಾರೆ. ಉಚ್ಚ ನ್ಯಾಯಾಲಯವು ಸಾಂವಿಧಾನಿಕ ನ್ಯಾಯಾಲಯವಾಗಿದೆ ’ಎಂದು ಪೀಠವು ತಿಳಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News