2021ನೆ ಸಾಲಿನ ಪದ್ಮ ಪ್ರಶಸ್ತಿಗಳು ಪ್ರಕಟ: ಪದ್ಮವಿಭೂಷಣ ಪ್ರಶಸ್ತಿಗೆ ಭಾಜನರಾದ ಡಾ. ಬಿ.ಎಂ ಹೆಗ್ಡೆ

Update: 2021-01-25 16:48 GMT
 ಬಿ.ಎಂ ಹೆಗ್ಡೆ- ಚಂದ್ರಶೇಖರ ಕಂಬಾರ

ಹೊಸದಿಲ್ಲಿ,ಜ.25: ಗಣರಾಜ್ಯೋತ್ಸವದಂದು ನೀಡಲಾಗುವ ದೇಶದ ಅತ್ಯುನ್ನತ ಪ್ರಶಸ್ತಿಗಳಾದ ಪದ್ಮ, ಪದ್ಮಭೂಷಣ ಮತ್ತು ಪದ್ಮ ವಿಭೂಷಣ ಪ್ರಶಸ್ತಿಗಳು ಪ್ರಕಟವಾಗಿದೆ. 

ಕರ್ನಾಟಕದ ಕರಾವಳಿ ಮೂಲದ ಖ್ಯಾತ ವೈದ್ಯ ಬಿ.ಎಂ ಹೆಗ್ಡೆ ಪದ್ಮವಿಭೂಷಣ ಪ್ರಶಸ್ತಿ ಪಡೆದ ಒಟ್ಟು 7 ಸಾಧಕರ ಪೈಕಿ ಒಬ್ಬರಾಗಿದ್ದಾರೆ. ಸಾಹಿತಿ ಚಂದ್ರಶೇಖರ ಕಂಬಾರ ಪದ್ಮಭೂಷಣ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

ರಾಜ್ಯದ ಐವರು ಸಾಧಕರಿಗೆ ಪದ್ಮ ಪ್ರಶಸ್ತಿಯ ಗೌರವ

ವೈದ್ಯಕೀಯ ಕ್ಷೇತ್ರದ ಸಾಧನೆಗಾಗಿ ಡಾ.ಬಿ.ಎಂ ಹೆಗ್ಡೆ ಅವರಿಗೆ ಪದ್ಮ ವಿಭೂಷಣ, ಸಾಹಿತ್ಯ ಹಾಗೂ ಶೈಕ್ಷಣಿಕ ಕ್ಷೇತ್ರಕ್ಕೆ ಸಲ್ಲಿಸಿರುವ ಅಪರಿಮಿತ ಸೇವೆಗಾಗಿ ಡಾ.ಚಂದ್ರಶೇಖರ ಕಂಬಾರ ಅವರನ್ನು ಪದ್ಮಭೂಷಣ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಕಲೆ ಕ್ಷೇತ್ರದಲ್ಲಿನ ಸಾಧನೆಗಾಗಿ ಮಾತಾ ಬಿ.ಮಂಜಮ್ಮ ಜೋಗತಿ, ಸಾಹಿತ್ಯ ಹಾಗೂ ಶಿಕ್ಷಣ ಕ್ಷೇತ್ರದ ಸಾಧನೆಗಾಗಿ ರಂಗಸ್ವಾಮಿ ಲಕ್ಷ್ಮಿ ನಾರಾಯಣ ಕಶ್ಯಪ್, ಕ್ರೀಡಾ ಕ್ಷೇತ್ರದಲ್ಲಿನ ಸಾಧನೆಗಾಗಿ ಕೆ.ವೈ.ವೆಂಕಟೇಶ್ ಅವರನ್ನು ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

''ಪ್ರಶಸ್ತಿ ಬಂದಿರುವುದಕ್ಕೆ ದೇವರಿಗೆ ಹಾಗೂ ದೇಶಕ್ಕೆ ಆಭಾರಿಯಾಗಿದ್ದೇನೆ. 2010ರಲ್ಲಿ ಪದ್ಮಭೂಷಣ ಪ್ರಶಸ್ತಿ ಬಂದಾಗಲೇ ಪದ್ಮವಿಭೂಷಣ ಪ್ರಶಸ್ತಿಯನ್ನು ನಿರೀಕ್ಷಿಸಿದ್ದೆ. ಕೊನೆಗೂ ಮನದಾಸೆ ಈಡೇರಿದೆ''.
- ಡಾ.ಬಿ.ಎಂ. ಹೆಗ್ಡೆ, ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತರು.

ಪದ್ಮವಿಭೂಷಣ ಪ್ರಶಸ್ತಿ ಪಡೆದವರ ಪಟ್ಟಿ

1. ಜಪಾನ್ ಮಾಜಿ ಪ್ರಧಾನಿ ಶಿಂಜೋ ಅಬೆ

2. ಎಸ್.ಪಿ ಬಾಲಸುಬ್ರಮಣ್ಯಮ್ (ಮರಣೋತ್ತರ)

3. ಬಿ.ಎಂ ಹೆಗ್ಡೆ

4. ನರೀಂದರ್ ಸಿಂಗ್ ಕಪನಿ (ಮರಣೋತ್ತರ)

5. ಮೌಲಾನ ವಹೀದುದ್ದೀನ್ ಖಾನ್

6. ಬಿ.ಬಿ ಲಾಲ್

7. ಸುದರ್ಶನ್ ಸಾಹೂ

ಪದ್ಮಭೂಷಣ ಪ್ರಶಸ್ತಿ ಪಡೆದವರ ಪಟ್ಟಿ

1. ಕೆ.ಎಸ್ ಚಿತ್ರಾ

2. ತರುಣ್ ಗೊಗೊಯಿ(ಮರಣೋತ್ತರ)

3. ಚಂದ್ರಶೇಖರ ಕಂಬಾರ

4. ಸುಮಿತ್ರಾ ಮಹಾಜನ್

5. ನೃಪೇಂದ್ರ ಮಿಶ್ರಾ

6. ರಾಮ್ ವಿಲಾಸ್ ಪಾಸ್ವಾನ್ (ಮರಣೋತ್ತರ)

7.ಕೇಶು ಭಾಯಿ ಪಟೇಲ್ (ಮರಣೋತ್ತರ)

8. ಕಲ್ಬೆ ಸಾದಿಕ್ (ಮರಣೋತ್ತರ)

9.ರಜನಿಕಾಂತ್ ದೇವಿದಾಸ್ ಶ್ರಫ್

10.ತರ್ಲೋಚನ್ ಸಿಂಗ್

ಪದ್ಮಶ್ರೀ ಪ್ರಶಸ್ತಿ ಪಡೆದವರ ಪಟ್ಟಿ

ರಾಜ್ಯದ ಮಾತಾ ಬಿ.ಮಂಜಮ್ಮ ಜೋಗತಿ, ರಂಗಸ್ವಾಮಿ ಲಕ್ಷ್ಮಿ ನಾರಾಯಣ ಕಶ್ಯಪ್, ಕೆ.ವೈ.ವೆಂಕಟೇಶ್ ಸೇರಿ ಒಟ್ಟು 102 ಸಾಧಕರನ್ನು ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

https://pib.gov.in/PressReleaseIframePage.aspx?PRID=1692337#.YA7lXvC1qHM.twitter

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News