ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ: ಮೇಲ್ಮನವಿ ಸಲ್ಲಿಸಲು ಮಹಾರಾಷ್ಟ್ರಕ್ಕೆ ಸೂಚಿಸಿದ ಎನ್‌ಸಿಪಿಸಿಆರ್

Update: 2021-01-25 17:37 GMT

ಮುಂಬೈ, ಜ. 25: ದೈಹಿಕ ಸಂಪರ್ಕ ಆಗದೇ ಇದ್ದರೆ, ಅದನ್ನು ಲೈಂಗಿಕ ದೌರ್ಜನ್ಯ ಎಂದು ವ್ಯಾಖ್ಯಾನಿಸಲು ಸಾಧ್ಯವಿಲ್ಲ ಎಂದು ಹೇಳಿದ ಬಾಂಬೆ ಉಚ್ಚ ನ್ಯಾಯಾಲಯದ ಇತ್ತೀಚೆಗಿನ ತೀರ್ಪಿನ ವಿರುದ್ಧ ತುರ್ತು ಮೇಲ್ಮನವಿ ಸಲ್ಲಿಸುವಂತೆ ದೇಶದ ಮಕ್ಕಳ ಹಕ್ಕುಗಳ ಬಗೆಗಿನ ಅತ್ಯುಚ್ಛ ಸಂಸ್ಥೆ ಮಕ್ಕಳ ಹಕ್ಕುಗಳ ರಕ್ಷಣೆಯ ರಾಷ್ಟ್ರೀಯ ಆಯೋಗ (ಎನ್‌ಸಿಪಿಸಿಆರ್) ಮಹಾರಾಷ್ಟ್ರ ಸರಕಾರವನ್ನು ಮಂಗಳವಾರ ಆಗ್ರಹಿಸಿದೆ.

ಮಹಾರಾಷ್ಟ್ರದ ಮುಖ್ಯ ಕಾರ್ಯದರ್ಶಿ ಅವರಿಗೆ ಬರೆದ ಪತ್ರದಲ್ಲಿ ಎನ್‌ಸಿಪಿಸಿಆರ್‌ನ ಅಧ್ಯಕ್ಷ ಪ್ರಿಯಾಂಕಾ ಕನೂಂಗೋ, ತೀರ್ಪಿನಲ್ಲಿರುವ ‘ಲೈಂಗಿಕ ಉದ್ದೇಶದಿಂದ ದೇಹದಿಂದ ದೇಹಕ್ಕೆ ನೇರ ಸಂಪರ್ಕ ಇದ್ದಾಗ ಮಾತ್ರ ಅದನ್ನು ಲೈಂಗಿಕ ದೌರ್ಜನ್ಯ’ ಎಂಬ ಪದವನ್ನು ಕೂಡ ಮರು ಪರಿಶೀಲಿಸುವ ಅಗತ್ಯತೆ ಇದೆ. ಪ್ರಕರಣದಲ್ಲಿ ಅಪ್ರಾಪ್ತ ಸಂತ್ರಸ್ತೆಯನ್ನು ಅವಹೇಳನ ಮಾಡುವಂತೆ ಕಾಣುವುದರಿಂದ ರಾಜ್ಯ ಸರಕಾರ ಗಮನ ಹರಿಸಬೇಕು ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News