ನಮ್ಮ ಪ್ರಯತ್ನದ ನಡುವೆಯೂ ʼಕೆಲ ಸಂಘಟನೆಗಳು ಮತ್ತು ವ್ಯಕ್ತಿಗಳುʼ ದುಷ್ಕೃತ್ಯಗಳಲ್ಲಿ ಭಾಗಿಯಾಗಿರುವುದು ಖಂಡನೀಯ

Update: 2021-01-26 11:30 GMT

ಹೊಸದಿಲ್ಲಿ,ಜ.26: ಗಣರಾಜ್ಯೋತ್ಸವ ದಿನದಂದು ಕೇಂದ್ರ ಸರಕಾರದ ಮೂರು ವಿವಾದಾತ್ಮಕ ಕೃಷಿ ಕಾಯ್ದೆಗಳನ್ನು ರದ್ದುಪಡಿಸಬೇಕು ಎಂದು ರೈತರು ಹಮ್ಮಿಕೊಂಡಿದ್ದ ರ್ಯಾಲಿಯು ಹಿಂಸಾಚಾರಕ್ಕೆ ತಿರುಗಿ, ಪೊಲೀಸರ ಮತ್ತು ಪ್ರತಿಭಟನಕಾರರ ನಡುವೆ ಘರ್ಷಣೆ ಏರ್ಪಟ್ಟಿತ್ತು. ಇದೀಗ ಈ ಕುರಿತು ಸಂಯುಕ್ತ ಕಿಸಾನ್‌ ಮೋರ್ಚ, "ನಮ್ಮ ಅತೀವ ಪ್ರಯತ್ನದ ನಡುವೆಯೂ ಕೆಲವು ವ್ಯಕ್ತಿಗಳು ಮತ್ತು ಕೆಲವು ಸಂಘಟನೆಗಳು ಖಂಡನಾತ್ಮಕ ಕೃತ್ಯಗಳಲ್ಲಿ ಭಾಗಿಯಾಗಿರುವುದು ವಿಷಾದನೀಯ ಎಂದು ಹೇಳಿಕೆ ನೀಡಿದೆ.

"ಇಂದಿನ ಕಾರ್ಯಕ್ರಮದಲ್ಲಿ ಭಾಗಿಯಾದ ಎಲ್ಲ ರೈತರಿಗೂ ನಾವು ಧನ್ಯವಾದ ಸಲ್ಲಿಸುತ್ತಿದ್ದೇವೆ. ಈ ಕಾರ್ಯಕ್ರಮದಲ್ಲಿ ಜರಗಿದ ಕೆಲವು ಅಹಿತಕರ ಸನ್ನಿವೇಶಗಳನ್ನು ನಾವು ಖಂಡಿಸುತ್ತಿದ್ದೇವೆ. ಇಂತಹಾ ಕೃತ್ಯಗಳಲ್ಲಿ ಭಾಗಿಯಾದವರು ನಮ್ಮವರಲ್ಲ. ಕೆಲಸ ಸಮಾಜಘಾತುಕ ಶಕ್ತಿಗಳು ಒಳನುಸುಳಿವೆ"

"ನಾವು ಶಾಂತಿಯುತವಾಗಿ ಪ್ರತಿಭಟನೆಯನ್ನು ನಡೆಸಲು ನಮ್ಮಿಂದಾಗುವಷ್ಟರ ಮಟ್ಟಿಗೆ ಪ್ರಯತ್ನಿಸಿದ್ದೇವೆ. ಅದಾಗ್ಯೂ, ಕೆಲ ಸಂಘಟನೆಗಳು ಮತ್ತು ಕೆಲ ಜನರು ಸಮಾಜವಿರೋಧಿ ಕೃತ್ಯಗಳನ್ನು ಎಸಗಿದ್ದಾರೆ. ಶಾಂತಿ ಯಾವತ್ತೂ ನಮ್ಮ ಅತಿದೊಡ್ಡ ಶಕ್ತಿಯಾಗಿದೆ. ಶಾಂತಿಭಂಗ ಮಾಡುವ ಯಾವುದೇ ಕೃತ್ಯಗಳು ನಮ್ಮ ಸಂಘಟನೆಗೆ ,ತ್ತು ಆಂದೋನಕ್ಕೆ ತೊಂದರೆಯುಂಟು ಮಾಡುತ್ತದೆ ಎಂದು ಸಂಯುಕ್ತ ಕಿಸಾನ್‌ ಮೋರ್ಚಾ ಹೇಳಿಕೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News