ದಿಲ್ಲಿ ಹಿಂಸಾಚಾರದ ನಡುವೆಯೂ ಹೂವು,ಆಹಾರ ಹಂಚಿಕೊಂಡ ರೈತರು, ಪೊಲೀಸರು

Update: 2021-01-26 12:06 GMT

ಹೊಸದಿಲ್ಲಿ: ನಗರದ ಹೃದಯಭಾಗದಲ್ಲಿ ರೈತರ ಪ್ರತಿಭಟನೆಯು ತೀವ್ರ ಸ್ವರೂಪ ಪಡೆದುಕೊಂಡಿರುವ ನಡುವೆಯೂ ದಿಲ್ಲಿ ಹಾಗೂ ಉತ್ತರಪ್ರದೇಶ ನಡುವಿನ ಚಿಲ್ಲಿ ಬಾರ್ಡರ್ ಪಾಯಿಂಟ್ ನಲ್ಲಿ ಮನಮೆಚ್ಚುವ ದೃಶ್ಯವೊಂದು ಕಂಡು ಬಂತು. ಇಲ್ಲಿ ಪ್ರತಿಭಟನಾನಿರತ ರೈತರು ದಿಲ್ಲಿ ಪೊಲೀಸರಿಗೆ ಹೂವುಗಳನ್ನು ಹಾಗೂ ಆಹಾರವನ್ನು ಹಂಚಿಕೊಂಡು ಗಮನ ಸೆಳೆದರು.

ಚಿಲ್ಲಾ ಗಡಿಭಾಗದಲ್ಲಿ ನೊಯ್ಡಾ  ಹೆಚ್ಚುವರಿ ಪೊಲೀಸ್ ಉಪ ಆಯುಕ್ತ ರಾನ್ ವಿಜಯ್ ಸಿಂಗ್ ಅವರಿಗೆ ಉತ್ತರಪ್ರದೇಶದ ಭಾರತ್ ಕಿಸಾನ್ ಯೂನಿಯನ್ ನ ಅಧ್ಯಕ್ಷ ಯೋಗೇಶ್ ಸಿಂಗ್ ಅವರು ಹೂಗಳನ್ನು ನೀಡಿದರು. ಪೊಲೀಸ್ ಅಧಿಕಾರಿ ಪ್ರತಿಭಟನಾಕಾರರು ತಯಾರಿಸಿದ್ದ ಆಹಾರವನ್ನು ಸೇವಿಸಿದರು.

ಇದಕ್ಕೂ ಮೊದಲು ಯೋಜಿತ ರೈತರ ಟ್ರ್ಯಾಕ್ಟರ್ ರ್ಯಾಲಿ ಸಂಪೂರ್ಣ ಹಿಡಿತ ತಪ್ಪಿಹೋಗಿದ್ದು, ನಗರವು ಕೆಲವು ಆಘಾತಕಾರಿ ದೃಶ್ಯಕ್ಕೆ ಸಾಕ್ಷಿಯಾಯಿತು.

ಗಣರಾಜ್ಯೋತ್ಸವ ದಿನದಂದೇ ಟ್ರ್ಯಾಕ್ಟರ್ ರ್ಯಾಲಿಯ ವೇಳೆ ಪೊಲೀಸರು ಹಾಗೂ ರೈತರ ನಡುವೆ ನಡೆದಿರುವ ಸಂಘರ್ಷದ ವೇಳೆ ಟ್ರ್ಯಾಕ್ಟರ್ ಮಗುಚಿ ಬಿದ್ದು ಓರ್ವ ವ್ಯಕ್ತಿ ಮೃತಪಟ್ಟಿರುವ ಘಟನೆ ನಡೆದಿದೆ.

ನಿಗದಿತ ಸಮಯಕ್ಕಿಂತ ಮೊದಲೇ ದಿಲ್ಲಿಯತ್ತ ಧಾವಿಸಿದ ರೈತರು ಪೊಲೀಸರು ಹಾಕಿದ್ದ ಬ್ಯಾರಿಕೇಡ್ ಗಳನ್ನು ಕೆಡವಿ ಹಾಕಿದ ಬಳಿಕ ಹಿಂಸಾಚಾರ ಆರಂಭವಾಗಿತ್ತು. ಸಮಾಜ ವಿರೋಧಿ ಶಕ್ತಿಗಳು ಈ ಹಿಂಸಾಚಾರದ ಹಿಂದಿದ್ದಾರೆ ಎಂದು ರೈತ ನಾಯಕರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News