'ಮಹಾವೀರ ಚಕ್ರ’ದಿಂದ ಸಂಪೂರ್ಣ ತೃಪ್ತಿಯಾಗಿಲ್ಲ: ಗಲ್ವಾನ್ ಹೀರೊ ಕರ್ನಲ್ ಸಂತೋಷ್ ಬಾಬು ತಂದೆ ಉಪೇಂದ್ರ

Update: 2021-01-26 12:31 GMT

ಹೈದರಾಬಾದ್: ತನ್ನ ಪುತ್ರನಿಗೆ ಮರಣೋತ್ತರವಾಗಿ ನೀಡಿರುವ 'ಮಹಾವೀರ ಚಕ್ರ' ಪ್ರಶಸ್ತಿಯಿಂದ ನನಗೆ ಸಂಪೂರ್ಣ ತೃಪ್ತಿಯಾಗಿಲ್ಲ ಎಂದು ಗಲ್ವಾನ್ ಸಂಘರ್ಷದ ಹೀರೊ ಕರ್ನಲ್ ಸಂತೋಷ್ ಬಾಬು ಅವರ ತಂದೆ ಸೋಮವಾರ ಹೇಳಿದ್ದಾರೆ.

16 ಬಿಹಾರ ರೆಜಿಮೆಂಟ್ ಅಧಿಕಾರಿಯಾಗಿದ್ದ ಸಂತೋಷ್ ಬಾಬು 2020ರ ಜೂನ್ ನಲ್ಲಿ ಉತ್ತರ ಲಡಾಖ್ ನ ಗಲ್ವಾನ್ ಕಣಿವೆಯಲ್ಲಿ ಚೀನಾ-ಭಾರತದ ಸೈನಿಕರ ನಡುವೆ ನಡೆದ ಹಿಂಸಾತ್ಮಕ ಸಂಘರ್ಷದಲ್ಲಿ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದರು. ಈ ಘಟನೆಯಲ್ಲಿ ಭಾರತದ 20 ಸೈನಿಕರು ಹುತಾತ್ಮರಾಗಿದ್ದರು.

“ನನಗೆ ಅಸಮಾಧಾನವಾಗಿದೆ ಎಂದರ್ಥವಲ್ಲ. ಆದರೆ ನನ್ನ ಪುತ್ರನಿಗೆ 'ಮಹಾವೀರ ಚಕ್ರ' ಲಭಿಸಿರುವುದಕ್ಕೆ ನನಗೆ ಶೇ.100ರಷ್ಟು ತೃಪ್ತಿಯಾಗಿಲ್ಲ.  ನನ್ನ ಮಗನನ್ನು ಇನ್ನಷ್ಟು ಉತ್ತಮ ರೀತಿಯಲ್ಲಿ ಗೌರವಿಸುವ ಅವಕಾಶವಿದೆ. ಆತ ತನ್ನ ಕರ್ತವ್ಯಗಳನ್ನು ನಿರ್ವಹಿಸುವಾಗ ಆತ ಪ್ರದರ್ಶಿಸಿದ ಶೌರ್ಯಕ್ಕಾಗಿ ಅತ್ಯುನ್ನತ ಮಿಲಿಟರಿ ಪ್ರಶಸ್ತಿ 'ಪರಮವೀರ್ ಚಕ್ರ'ಕ್ಕೆ ಆಯ್ಕೆ ಮಾಡಬೇಕಾಗಿತ್ತು ಎಂದು ಬಾಬು ಅವರ ತಂದೆ ಬಿ.ಉಪೇಂದ್ರ ಪಿಟಿಐಗೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News