ಶಾಂತಿ ಕಾಪಾಡುವಂತೆ ಪ್ರತಿಭಟನಾನಿರತರಿಗೆ ರೈತ ನಾಯಕರ ಮನವಿ

Update: 2021-01-27 08:01 GMT

ಹೊಸದಿಲ್ಲಿ: ಕೇಂದ್ರದ ಕೃಷಿ ಕಾಯಿದೆಗಳ ವಿರುದ್ಧ ರೈತರ ಪ್ರತಿಭಟನೆ ದೀರ್ಘಕಾಲಿಕವಾಗಿರುವುದರಿಂದ ಪ್ರತಿಭಟನಾ ನಿರತ ರೈತರು ಶಾಂತಿ ಕಾಪಾಡಬೇಕೆಂದು ರೈತ ನಾಯಕರು ಇಂದು ಮನವಿ ಮಾಡಿದ್ದಾರೆ. ಮಂಗಳವಾರ ಟ್ರ್ಯಾಕ್ಟರ್ ರ್ಯಾಲಿ ವೇಳೆ ನಡೆದ ವ್ಯಾಪಕ ಹಿಂಸಾಚಾರದ ನಂತರದ ಬೆಳವಣಿಗೆಯಲ್ಲಿ ಇಂದು ರೈತ ನಾಯಕರು ದಿಲ್ಲಿ-ಹರಿಯಾಣ ನಡುವಿನ ಪ್ರಮುಖ ಗಡಿ ಪ್ರದೇಶದಲ್ಲಿ ರೈತರನ್ನು ಉದ್ದೇಶಿಸಿ ಮಾತನಾಡಿದ್ದಾರೆ.

ಮಂಗಳವಾರದ ಹಿಂಸಾತ್ಮಕ ಘಟನೆಗಳಿಗೂ ತಮಗೂ ಸಂಬಂಧವಿಲ್ಲವೆಂದು ರೈತ ಯೂನಿಯನ್ ನಾಯಕರು ಹೇಳಿದ್ದಾರೆ ಹಾಗೂ ಹೋರಾಟಕ್ಕೆ ಕೆಟ್ಟ ಹೆಸರು ತರುವ ಉದ್ದೇಶದಿಂದ ನಡೆದ ಷಡ್ಯಂತ್ರವೆಂದೂ ಆರೋಪಿಸಿದ್ದಾರೆ.

ಕೆಲ ರೈತರ ನಾಯಕರು ಈಗಾಗಲೇ ಪಂಜಾಬಿ ನಟ ದೀಪ್ ಸಿಧು ಅವರನ್ನು ಮಂಗಳವಾರದ ಹಿಂಸಾತ್ಮಕ ಘಟನೆಗಳಿಗೆ ಹಾಗೂ ಕೆಂಪು ಕೋಟೆಯಲ್ಲಿ ಸಿಖ್ ಧಾರ್ಮಿಕ ಧ್ವಜ ಹಾರಿಸಿದ ಘಟನೆಗೆ ಹೊಣೆಯಾಗಿಸಿದ್ದಾರೆ.

"ದೀಪ್ ಸಿಧು ಸರಕಾರದ ವ್ಯಕ್ತಿ. ಈ ಷಡ್ಯಂತ್ರದ ಕುರಿತು ನಾವು ತಿಳಿಯಬೇಕಿದೆ. ಈ ಜನರು ಕೆಂಪು ಕೋಟೆ ಹೇಗೆ ತಲುಪಿದರು ಹಾಗೂ ಪೊಲೀಸರು ಅವರಿಗೆ  ಹೇಗೆ ಅನುಮತಿಸಿದರು,?'' ಎಂದು ರೈತ ನಾಯಕರೊಬ್ಬರು ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News