ಸಂಸತ್ತಿನತ್ತ ಬಜೆಟ್ ರ‍್ಯಾಲಿ ಮುಂದೂಡಿದ ರೈತ ಮುಖಂಡರುಗಳು

Update: 2021-01-27 17:05 GMT

ಹೊಸದಿಲ್ಲಿ: ಗಣರಾಜ್ಯೋತ್ಸವ ದಿನದಂದು ಟ್ರ್ಯಾಕ್ಟರ್ ರ್ಯಾಲಿಯ ವೇಳೆ ರಾಷ್ಟ್ರ ರಾಜಧಾನಿಯಲ್ಲಿ ಹಿಂಸಾಚಾರ ನಡೆದ ಹಿನ್ನೆಲೆಯಲ್ಲಿ ಕೇಂದ್ರ ಸರಕಾರದ ಮೂರು ವಿವಾದಾತ್ಮಕ ಕೃಷಿ ಕಾನೂನುಗಳನ್ನು ವಿರೋಧಿಸಿ ವಾರ್ಷಿಕ ಬಜೆಟ್ ಮಂಡನೆಯಾಗಲಿರುವ  ಫೆಬ್ರವರಿ 1 ರಂದು ಸಂಸತ್ತಿನತ್ತ ನಡೆಸಲು ಉದ್ದೇಶಿಸಲಾಗಿದ್ದ ಪಾದಯಾತ್ರೆ ಯನ್ನು ಮುಂದೂಡಲು ರೈತ ನಾಯಕರು ನಿರ್ಧರಿಸಿದ್ದಾರೆ.

ಫೆಬ್ರವರಿ 1ರಂದು ಬಜೆಟ್ ಮಂಡನೆಯ ದಿನ ಸಂಸತ್ತಿನತ್ತ ನಡೆಸಲು ಯೋಜಿಸಲಾಗಿದ್ದ ಪಾದಯಾತ್ರೆಯನ್ನು ರದ್ದುಪಡಿಸಿದ್ದೇವೆ ಎಂದು ರೈತ ನಾಯಕ ದರ್ಶನ್ ಪಾಲ್ ಪ್ರಕಟಿಸಿದರು.

ಆದಾಗ್ಯೂ ನಮ್ಮ ಪ್ರತಿಭಟನೆ ಹಾಗೂ ಸಾರ್ವಜನಿಕ ಸಭೆಗಳು ಮುಂದುವರಿಯಲಿದೆ. ಜನವರಿ 30ರಂದು ದೇಶಾದ್ಯಂತ ಉಪವಾಸ ಸತ್ಯಾಗ್ರಹ ನಡೆಸಲಿದ್ದೇವೆ ಎಂದು ದರ್ಶನ್ ಪಾಲ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News