ಉತ್ತರ ಪ್ರದೇಶ: ರೈತ ಹೋರಾಟಗಾರರ ಮೇಲೆ ಲಾಠಿಪ್ರಹಾರ

Update: 2021-01-28 04:05 GMT

ಲಕ್ನೋ: ಗಣರಾಜ್ಯೋತ್ಸವ ದಿನದ ಹಿಂಸಾಚಾರದ ಬಳಿಕ ರೈತ ಚಳವಳಿ ದೇಶಾದ್ಯಂತ ವ್ಯಾಪಿಸಿದೆ. ದೆಹಲಿಯಲ್ಲಿ ಟ್ರ್ಯಾಕ್ಟರ್ ರ್ಯಾಲಿ ಆಯೋಜಿಸಿದ ರೈತ ಮುಖಂಡರ ವಿರುದ್ಧ ಕ್ರಮಕ್ಕೆ ಆದಿತ್ಯನಾಥ್ ಸರ್ಕಾರ ಮುಂದಾಗಿದೆ. ಬುಧವಾರ ಮಧ್ಯರಾತ್ರಿ ಪ್ರತಿಭಟನೆ ಕೈಗೊಂಡ ರೈತರ ಮೇಲೆ ಭಾಗ್‌ಪಥ್ ಪೊಲೀಸರು ಲಾಠಿ ಬೀಸಿದರು.

ದೆಹಲಿ- ಸಹರಣಪುರ ಹೆದ್ದಾರಿಯಲ್ಲಿ ಡಿಸೆಂಬರ್ 19ರಿಂದಲೂ ರೈತರು ಪ್ರತಿಭಟನೆ ನಡೆಸುತ್ತಿದ್ದು, ಪ್ರತಿಭಟನಾಕಾರರನ್ನು ಚದರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದರು.

ರೈತರ ಟೆಂಟ್‌ಗಳನ್ನು ಕಿತ್ತುಹಾಕಲಾಗಿದೆ. ಈ ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ರೈತರ ಪ್ರತಿಭಟನೆಯಿಂದಾಗಿ ಹೆದ್ದಾರಿ ಕಾಮಗಾರಿಕೆ ತಡೆ ಉಂಟಾಗಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಪೊಲೀಸರಿಗೆ ಪತ್ರ ಬರೆದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಂಡಿರುವುದಾಗಿ ಬಾಗ್‌ಪಥ್ ಎಡಿಎಂ ಸಮರ್ಥಿಸಿಕೊಂಡಿದ್ದಾರೆ.

40 ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಭೃಜ್‌ಪಾಲ್ ಸಿಂಗ್ ಅವರನ್ನು ಬಂಧಿಸಲಾಗಿದೆ.
ಏತನ್ಮಧ್ಯೆ ರೈತರ ಪ್ರತಿಭಟನೆ ಮತ್ತು ಹಿಂಸಾಚಾರದ ವೇಳೆ ಕೆಂಪುಕೋಟೆಗೆ ಹಾನಿಯಾಗಿರುವುದಾಗಿ ದೂರಲಾಗಿದ್ದು, ಪ್ರಾಚ್ಯಶಾಸ್ತ್ರ ಇಲಾಖೆ ತಕ್ಷಣದಿಂದ ಕೆಂಪುಕೋಟೆಗೆ ಈ ತಿಂಗಳ 31ರವರೆಗೆ ಸಾರ್ವಜನಿಕ ಪ್ರವೇಶ ನಿಷೇಧಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News