×
Ad

ಹತ್ರಸ್ ಅತ್ಯಾಚಾರ ಸಂತ್ರಸ್ತೆ ಎಂದು ಮೃತ ಮಹಿಳೆಯ ಫೋಟೋ ತೋರಿಸಿದ ಪ್ರಕರಣ

Update: 2021-01-28 23:19 IST

ಹೊಸದಿಲ್ಲಿ, ಜ.28: ಮೃತ ಮಹಿಳೆಯ ಫೋಟೋವನ್ನು ಹತ್ರಸ್ ಅತ್ಯಾಚಾರ ಸಂತ್ರಸ್ತೆ ಎಂದು ತಪ್ಪಾಗಿ ತೋರಿಸಿದ ವೀಡಿಯೊದ ಎಲ್ಲಾ ಲಿಂಕ್‌ಗಳನ್ನೂ ಬ್ಲಾಕ್ ಮಾಡಿರುವುದಾಗಿ ಸಾಮಾಜಿಕ ಮಾಧ್ಯಮ ಸಂಸ್ಥೆಗಳಾದ ಫೇಸ್‌ಬುಕ್, ಗೂಗಲ್ ಹಾಗೂ ಟ್ವಿಟರ್ ಗುರುವಾರ ದಿಲ್ಲಿ ಹೈಕೋರ್ಟ್‌ಗೆ ತಿಳಿಸಿವೆ.

ಮೃತ ಮಹಿಳೆ ಹತ್ರಸ್ ಅತ್ಯಾಚಾರ ಸಂತ್ರಸ್ತೆ ಎಂದು ತೋರಿಸುವ ವೀಡಿಯೊದ ಲಿಂಕ್‌ಗಳನ್ನು ತೆಗೆದು ಹಾಕುವಂತೆ 2020ರ ನವೆಂಬರ್ 23ರಂದು ದಿಲ್ಲಿ ಹೈಕೋರ್ಟ್ ಸೂಚಿಸಿತ್ತು. ಮೃತ ಪತ್ನಿಯ ಫೋಟೋ ವಿವಿಧ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗುತ್ತಿದ್ದು ಇವಳು ಉತ್ತರಪ್ರದೇಶದ ಹತ್ರಸ್‌ನಲ್ಲಿ ನಡೆದ ಅತ್ಯಾಚಾರ ಪ್ರಕರಣದ ಸಂತ್ರಸ್ತೆ ಎಂದು ತೋರಿಸಲಾಗುತ್ತಿದೆ ಎಂದು ದೂರಿ ವ್ಯಕ್ತಿಯೊಬ್ಬರು ದಿಲ್ಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಗುರುವಾರ ಅರ್ಜಿಯ ವಿಚಾರಣೆ ಸಂದರ್ಭ ಹೇಳಿಕೆ ನೀಡಿದ ವ್ಯಕ್ತಿ, ಆಕ್ಷೇಪಾರ್ಹ ಫೋಟೋಕ್ಕೆ ಸಂಬಂಧಿಸಿದ ಎಲ್ಲಾ ಲಿಂಕ್‌ಗಳನ್ನೂ ಫೇಸ್‌ಬುಕ್ ತೆಗೆದು ಹಾಕಿಲ್ಲ. ಇನ್ನೂ ಉಳಿದಿರುವ ಲಿಂಕ್‌ಗಳ ಬಗ್ಗೆ ದಾಖಲೆ ಸಹಿತ ವಿವರ ಸಲ್ಲಿಸಲು ಕಾಲಾವಕಾಶ ನೀಡುವಂತೆ ಕೋರಿದರು. ಇದಕ್ಕೆ ಸಮ್ಮತಿಸಿದ ಹೈಕೋರ್ಟ್, ಎಪ್ರಿಲ್ 12ರವರೆಗೆ ಕಾಲಾವಕಾಶ ನೀಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News