ಅರುಣಾಚಲ ಪ್ರದೇಶ:ಕಟ್ಟಡ ನಿರ್ಮಾಣಕ್ಕಾಗಿ ಸೇನೆಯಿಂದ 14 ಎಕರೆ ಭೂಸ್ವಾಧೀನ

Update: 2021-01-30 14:07 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ,ಜ.30: ಗಡಿಗಳಲ್ಲಿ ತನ್ನ ಉಪಸ್ಥಿತಿಯನ್ನು ಇನ್ನಷ್ಟು ಬಲಗೊಳಿಸಲು ನಿರಂತರ ಪ್ರಯತ್ನಗಳ ಭಾಗವಾಗಿ ಭಾರತೀಯ ಸೇನೆಯು ಅರುಣಾಚಲ ಪ್ರದೇಶದ ಪಶ್ಚಿಮ ಸಿಯಾಂಗ್ ಜಿಲ್ಲೆಯಲ್ಲಿ ಸುಮಾರು 14 ಎಕರೆ ಭೂಮಿಯನ್ನು ಸ್ವಾಧೀನ ಪಡಿಸಿಕೊಂಡಿದೆ.

ಸೇನೆಯು ಪ್ರದೇಶದಲ್ಲಿಯ ಚೀನಾದೊಂದಿಗಿನ ಗಡಿಯಲ್ಲಿ ನಿಯೋಜಿತರಾಗಿರುವ ತನ್ನ ಯೂನಿಟ್‌ಗಳಿಗಾಗಿ ಕಟ್ಟಡವೊಂದನ್ನು ನಿರ್ಮಿಸಲು ಈ ಭೂಮಿಯನ್ನು ಬಳಸಿಕೊಳ್ಳಲಿದೆ. ಇಂತಹ ಭೂಸ್ವಾಧೀನಗಳು ಮಾಮೂಲಿಯಾಗಿವೆ ಮತ್ತು ಕರ್ತವ್ಯನಿರತ ಯೂನಿಟ್‌ಗಳಿಗೆ ಅಗತ್ಯವಾದಾಗಲೆಲ್ಲ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲಾಗುತ್ತದೆ ಎಂದು ಬೆಳವಣಿಗೆಯನ್ನು ಹತ್ತಿರದಿಂದ ಬಲ್ಲ ಮೂಲಗಳು ತಿಳಿಸಿದವು.

ದಿಮಾಪುರದಲ್ಲಿಯ 3 ಕಾರ್ಪ್ಸ್ ಮತ್ತು ತೇಝಪುರದಲ್ಲಿಯ ಕಾರ್ಪ್ಸ್ 4 ಅರುಣಾಚಲ ಪ್ರದೇಶದ ಉಸ್ತುವಾರಿಯನ್ನು ಹೊಂದಿದ್ದು,ಪೂರ್ವ ಲಡಾಖ್ ಮತ್ತು ಇತರ ಪ್ರದೇಶಗಳಲ್ಲಿ ಚೀನಾದೊಂದಿಗಿನ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಮುಂಚೂಣಿ ಪ್ರದೇಶದಲ್ಲಿ ತಮ್ಮ ಸಿಬ್ಬಂದಿಗಳನ್ನು ನಿಯೋಜಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News