×
Ad

ಕೋಲ್ಕತಾ ಆಸ್ಪತ್ರೆಯಿಂದ ಬಿಡುಗಡೆಯಾದ ಸೌರವ್ ಗಂಗುಲಿ

Update: 2021-01-31 12:21 IST

ಕೋಲ್ಕತಾ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಅಧ್ಯಕ್ಷ ಸೌರವ್ ಗಂಗುಲಿ ರವಿವಾರ ಬೆಳಗ್ಗೆ ಆಸ್ಪತ್ರೆಯಿಂದ ಬಿಡುಗಡೆಯಾದರು. 

ಎರಡನೇ ಬಾರಿ ಆ್ಯಂಜಿಯೋಪ್ಲಾಸ್ಟಿಗೆ ಒಳಗಾದ ಮೂರು ದಿನಗಳ ಬಳಿಕ ಗಂಗುಲಿ ಆಸ್ಪತೆಯಿಂದ ಬಿಡುಗಡೆಯಾದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

48ರ ವಯಸ್ಸಿನ ಕ್ರಿಕೆಟ್ ದಂತಕತೆ ಗಂಗುಲಿ ಹೃದಯಸಂಬಂಧಿ ಸಮಸ್ಯೆಯಿಂದಾಗಿ ಬುಧವಾರ ಎರಡನೇ ಬಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಖ್ಯಾತ ಹೃದಯತಜ್ಞ ಡಾ.ದೇವಿ ಶೆಟ್ಟಿ ಹಾಗೂ ಡಾ.ಅಶ್ವಿನ್ ಒಳಗೊಂಡ ವೈದ್ಯರ ತಂಡ ಗುರುವಾರದಂದು ಗಂಗುಲಿಗೆ ಶಸ್ತ್ರ್ತಚಿಕಿತ್ಸೆಯ ವೇಳೆ ಇನ್ನೆರೆಡು ಸ್ಟೆಂಟ್ ಗಳನ್ನು ಅಳವಡಿಸಿದೆ. 
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News